Select Page

ಮೃತಪಟ್ಟ ಮಹಿಳೆಯರ ನಗ್ನ ಫೋಟೋಶೂಟ್ ; ಶವಾಗಾರ ಸಿಬ್ಬಂದಿಯಿಂದ ಹೀನ ಕೃತ್ಯ

ಮೃತಪಟ್ಟ ಮಹಿಳೆಯರ ನಗ್ನ ಫೋಟೋಶೂಟ್ ; ಶವಾಗಾರ ಸಿಬ್ಬಂದಿಯಿಂದ ಹೀನ ಕೃತ್ಯ



ಬೀದರ್ : ಮೃತಪಟ್ಟ ಮಹಿಳೆಯರ ನಗ್ನ ಫೋಟೋ ತಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದ ವ್ಯಕ್ತಿಯ ವಿಕೃತ ಕಾರ್ಯ ಬಯಲಾಗಿದೆ.‌

ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಈ‌ ಹೀನ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಕಾಯಿಲೆ, ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಮಹಿಳೆಯರ ಶವವನ್ನು ಶವಾಗಾರಕ್ಕೆ ತಂದಾಗ ಶವದ ಬಟ್ಟೆ ಬಿಚ್ಚಿ ಬೆತ್ತಲೆ ಫೋಟೋ ತಗೆದು ಜಾಲತಾಣದಲ್ಲಿ ಹರಿಬಿಡುವ ಕೃತ್ಯ ನಡೆದಿದೆ.

ಬ್ರಿಮ್ಸ್ ಆಸ್ಪತ್ರೆಯ ಶವಾಗಾರ ಕೋಣೆಯ ಅಟೆಂಡರ್ ಮುನಿರ್ ಅಹಮ್ಮದ್ ಇಂತಹ ವಿಕೃತಿ ಎಸಗಿರುವುದು ತಿಳಿದುಬಂದಿದೆ. ಈತನ ವಿರುದ್ಧ ಆಸ್ಪತ್ರೆ ವಿಧಿವಿಜ್ಞಾನ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಮೊಸಿನ್ ಉಲ್ ಹಕ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಧ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆರೋಪಿ ನಗ್ನ ಫೋಟೋ ಹಾಗೂ ವೀಡಿಯೋ ತಗೆದ ಬಳಿಕ ನಕಲಿ ಖಾತೆಗಳ ಮೂಲಕ ಜಾಲತಾಣದಲ್ಲಿ ಹರಿಬಿಡುವ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.

ಸಧ್ಯ ಈ ಪ್ರಕರಣದಿಂದ ಇಡೀ ನಾಗರಿಕ ಸಮಾಜ ತಕೆ ತಗ್ಗಿಸುವಂತಾಗಿದೆ. ಈ ಘಟನೆಯಿಂದ ಮಹಿಳೆಯರ ಘನತೆ ಹಾಗೂ ಕುಟುಂಬದರ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ವೈದ್ಯರು ಹೇಳಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!