Select Page

ಮುಹೂರ್ತ ಫಿಕ್ಸ್ ಆಗಿದೆ ; ನಾನು ಪ್ರಶ್ನೆ ಪತ್ರಿಕೆ ಲೀಕ್ ಮಾಡಲ್ಲ : ಅಚ್ಚರಿ ಹೇಳಿಕೆ‌ ನೀಡಿದ‌ ಸಾಹುಕಾರ್…!

ಮುಹೂರ್ತ ಫಿಕ್ಸ್ ಆಗಿದೆ ; ನಾನು ಪ್ರಶ್ನೆ ಪತ್ರಿಕೆ ಲೀಕ್ ಮಾಡಲ್ಲ : ಅಚ್ಚರಿ ಹೇಳಿಕೆ‌ ನೀಡಿದ‌ ಸಾಹುಕಾರ್…!



ಬೆಂಗಳೂರ: ಕರ್ನಾಟಕ ಕಾಂಗ್ರೆಸ್ ಬಳಗದಲ್ಲಿ ಕಳೆದ ಆರು ತಿಂಗಳುಗಳಿಂದ ಹೊಗೆಯಾಡುತ್ತಿದ್ದ ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ಪುನರಚನೆಯ ಗೊಂದಲಗಳಿಗೆ ನಾಳೆ ಅಂತ್ಯ ತೆರೆ ಬೀಳುವ ಸಾಧ್ಯತೆ ಇದೆ. ನವದೆಹಲಿಯಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಹೈಕಮಾಂಡ್ ಮಹತ್ವದ ಸಭೆ ಕರೆದಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಬುಲಾವ್ ನೀಡಿದೆ.

ಈ ಕುರಿತು ಮಾತನಾಡಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ನಾಳೆ 11 ಗಂಟೆಗೆ ಹೈಕಮಾಂಡ್ ಪ್ರಶ್ನೆ ಪತ್ರಿಕೆ ಕೊಡುತ್ತೆ. ಆ ಬಳಿಕ ಪ್ರಶ್ನೆಗೆ ಉತ್ತರ ಟಿಕ್ ಮಾಡ್ತಾರೆ. ಮೊದಲೇ ಪ್ರಶ್ನೆ ಪತ್ರಿಕೆ ಲೀಕ್ ಮಾಡೋಲ್ಲ ಬಿಡಿ ಎಂದು ಪರೋಕ್ಷವಾಗಿ ಅಧಿಕಾರ ಹಂಚಿಕೆ ಚರ್ಚೆಗೆ ಬ್ರೇಕ್ ಬೀಳಲಿದೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.

ಸಭೆಯ ಅಜೆಂಡಾ ಬಗ್ಗೆ ತಮಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ಕಳೆದ ಆರು ತಿಂಗಳಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸಲೆಂದೇ ಹೈಕಮಾಂಡ್ ಈ ಸಭೆ ಕರೆದಿದೆ ಎಂಬ ಸೂಚನೆ ಇದೆ ಎಂದು ಜಾರಕಿಹೊಳಿ ತಿಳಿಸಿದ್ದಾರೆ. ಇವಿಎಂ ಓಪನ್ ಆದ ಮಲೆಯೇ ಯಾರಿಗೆ ಎಷ್ಟು ವೋಟ್ ಬಿದ್ದಿದೆ ಎಂದು ಗೊತ್ತಾಗುತ್ತದೆ. ನಾಳೆಯ ಸಭೆಯ ಬಳಿಕವೇ ಹೈಕಮಾಂಡ್ ‌ನಿರ್ಧಾರ ಏನೆಂದು ಸ್ಪಷ್ಟವಾಗಲಿದೆ ಎಂದರು.

ದೆಹಲಿಯತ್ತ ಮುಖ ಮಾಡಿದ ಸಚಿವರು, ಶಾಸಕ ದಂಡು :

ಈ ಸಭೆ ಕೇವಲ ಔಪಚಾರಿಕ ಸಭೆ ಅಲ್ಲ ಎಂಬುದು ರಾಜ್ಯ ನಾಯಕರ ದೆಹಲಿ ಪ್ರವಾಸದಿಂದ ಸ್ಪಷ್ಟವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಸಚಿವರಾದ ಜಿ. ಪರಮೇಶ್ವರ್, ಹೆಚ್.ಸಿ. ಮಹದೇವಪ್ಪ, ಕೆ.ಜೆ. ಜಾರ್ಜ್, ಭೈರತಿ ಸುರೇಶ್ ಮತ್ತು ಸತೀಶ್ ಜಾರಕಿಹೊಳಿ ಅವರನ್ನೆಲ್ಲಗೊಂಡ ಪ್ರಮುಖ ನಾಯಕರು ದಂಡೇ ದೆಹಲಿಗೆ ತೆರಳಿದ್ದಾರೆ. ಇದರ ಬೆನ್ನಲ್ಲೇ ಸಚಿವರಾದ ಪ್ರಿಯಾಂಕ್ ಖರ್ಗೆ, ನರೇಂದ್ರ ಸ್ವಾಮಿ, ಹಂಪನಗೌಡ ಬಾದರ್ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಶಾಸಕರು ಮತ್ತು ದಂಡುಗಳೂ ಕೂಡ ಇತ್ತು ಸಂಜೆಯೇ ದೆಹಲಿಗೆ ಪ್ರಯಾಣ ಬೆಳೆಸಿರುವುದು ಭಾರಿ ಕುತೂಹಲ ಮೂಡಿಸಿದೆ.

ರಾಹುಲ್ ಗಾಂಧಿ ನಡೆ ಮೇಲೆ ಎಲ್ಲರ ಕಣ್ಣು : ನಾಳೆಯ ಸಭೆಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಆಗಮಿಸಲಿದ್ದಾರೆ ಎಂಬುದು ಮುಖ್ಯವಾಗಿದೆ. ಒಂದು ವೇಳೆ ರಾಹುಲ್ ಗಾಂಧಿ ಅವರು ಸಭೆಯಲ್ಲಿ ಭಾಗವಹಿಸಿ ನಾಯಕರ ಜೊತೆ ಚರ್ಚೆ ನಡೆಸಿದರೆ ಮುಂದಿನ ನಿರ್ಧಾರಗಳಿಗೆ ಮಹತ್ವ ಸಿಗಲಿದೆ.

ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರನ್ನು ಜೊತೆಗೆ ಕರೆದುಕೊಂಡುಹೋಗುತ್ತಿರುವುದು ಹೈಕಮಾಂಡ್ ಮುಂದೆ ತಮ್ಮ ಸಂಭಾವ್ಯ ಪ್ರದರ್ಶನಗಳು ಮತ್ತು ತಮ್ಮ ಸಾಧನ ಭದ್ರಪಡಿಸಿಕೊಳ್ಳಲು ಹೊಡಿದುವ ತಂತ್ರ ಎನ್ನಲಾಗಿದೆ.

ಇನ್ನೊಂದೆ, ಡಿಸಿಎಂ ಡಿಕೆ ಶಿವಕುಮಾರ್ ಅವರ ಪಾಳಯವೂ ಈ ಸಭೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ನಾಳೆ ಬೆಳಗ್ಗೆ ದೆಹಲಿಯಲ್ಲಿ ನಡೆಯಲಿರುವ ಹೈಕಮಾಂಡ್ ಸಭೆಯು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮುಂದಿನ ದಿಕ್ಕನ್ನು ನಿರ್ಧರಿಸಲಿದೆ ಎಂದು ರಾಜ್ಯದ ಹಲವು ದೆಹಲಿಯ ನಾಯಕರು ತಿಳಿಸಿದ್ದಾರೆ.


Advertisement

Leave a reply

Your email address will not be published. Required fields are marked *

error: Content is protected !!