ಜನರ ಸೇವೆಗೆ ಸಜ್ಜಾದ ಕಾಮಾಖ್ಯಾ ಡೈಗ್ನೋಸ್ಟಿಕ್ & ಸಂಶೋಧನಾ ಪ್ರಯೋಗಾಲಯ

ಬೆಳಗಾವಿ : ಜನಸಂಖ್ಯೆ ಹೆಚ್ಚಳವಾದಂತೆ ನಗರಗಳು ಬೆಳೆಯುತ್ತವೆ. ತೊಂದರೆಯಿಂದ ಬಳಲುವ ಜನಸಾಮಾನ್ಯರ ನೆರವಿಗೆ ವೈದ್ಯರು ಬರಬೇಕು. ರೋಗಿಗಳನ್ನು ದೇವರಂತೆ ನೋಡಿಕೊಂಡಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಇಂತಹ ಕೆಲಸವನ್ನು ಕಾಮಾಖ್ಯಾ ಡೈಗ್ನೋಸ್ಟಿಕ್ ಮತ್ತು ಸಂಶೋಧನಾ ಪ್ರಯೋಗಾಲಯದಿಂದ ಆಗಲಿ ಎಂದು ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಸದಾಶಿವ ನಗರದಲ್ಲಿ ಭಾನುವಾರ ಜರುಗಿದ ಕಾಮಾಖ್ಯಾ ಡೈಗ್ನೋಸ್ಟಿಕ್ ಮತ್ತು ಸಂಶೋಧನಾ ಪ್ರಯೋಗಾಲಯ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಜಿಲ್ಲಾ ವೈದ್ಯಾಧಿಕಾರಿ ಡಾ.ಐ.ಪಿ.ಗಡಾದ ಮಾತನಾಡಿ ಆಸ್ಪತ್ರೆಯೊಳಗೆ ಹೋದರೆ ಜೇಬು ಖಾಲಿ ಆಗುತ್ತದೆ ಎಂದು ಜನ ಭಾವಿಸಿರುವ ಈ ದಿನಗಳಲ್ಲಿ ಒಂದೇ ಸೂರಿನಡಿ ಸಕಲ ಸೌಲಭ್ಯಗಳನ್ನು ಒದಗಿಸುವ ನೂತನ ಪ್ರಯೋಗ ಪ್ರಾರಂಭಿಸಿರುವ ಕಾಮಾಖ್ಯಾ ಡೈಗ್ನೋಸ್ಟಿಕ್ ಹೆಜ್ಜೆ ಶ್ಲಾಘನೀಯ ಎಂದರು.
ಡಿಸಿಪಿ ನಾರಾಯಣ ಭರಮನಿ ಅವರು ಮಾತನಾಡಿ ಕರೋನಾ ಕಾಲದ ನಂತರ ಕ್ಟಾಲಿಟಿ ಟ್ರಸ್ಟ ಟೆಸ್ಟ್,ಈಕಾನಮಿ ಕ್ಲಾಸ್ ಟೆಸ್ಟ್,ಮತ್ತು ಮನೆಗೆ ಬಂದು ಸೇವೆ ಸಲ್ಲಿಸುತ್ತಿರುವದು ಬಹಳಷ್ಟು ಅನುಕೂಲಕರ ಸಂಗತಿ. ಜಿಲ್ಲೆಯ ಜನರಿಗೆ ಹಾಗೂ ಗಡಿಭಾಗದಲ್ಲಿ ವಾಸಿಸಿರುವ ಜನರಿಗೆ ಉದ್ಯಮ ಎಂದು ತಿಳಿಯದೇ ಇದೊಂದು ಸೇವೆ ಎಂದು ತಿಳಿದು ಆರೋಗ್ಯ ಸೇವೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ್ ಕವಟಗಿಮಠ ಮಾತನಾಡಿ. ಪ್ರತಿಯೊಬ್ಬ ಮನುಷ್ಯನ ಜೀವ ಅತ್ಯಮೂಲ್ಯ. ಸಾಕಷ್ಟು ವೈದ್ಯಕೀಯ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ನಿಖರವಾದ ತಪಾಸಣೆ ಮುಖ್ಯ.ಈ ನಿಟ್ಟಿನಲ್ಲಿ ಕಾಮಾಖ್ಯ ಸಂಸ್ಥೆ ಮಾನ್ಯತೆಯನ್ನು ಹೊಂದಿರುವ ಸಂಸ್ಥೆಯಾಗಿದ್ದು ಅತ್ಯಾಧುನಿಕ ಹಾಗೂ ಗುಣಮಟ್ಟದ ಸೇವೆ ಸಲ್ಲಿಸಲಿದೆ. ಕೆ ಎಲ್ ಇ ಆಸ್ಪತ್ರೆ ಕಾಮಾಖ್ಯ ಸಂಸ್ಥೆ ಗೆ ಸದಾ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಕಾಮಾಖ್ಯಾ ಡೈಗ್ನೋಸ್ಟಿಕ್ ಮತ್ತು ಸಂಶೋಧನಾ ಪ್ರಯೋಗಾಲಯದ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಎಂ ಕವೀಶ್ವರ, ಸಂಸ್ಥೆಯ ನಿರ್ದೇಶಕ ಅನಿಲ ಪಾಟೀಲ ಸಂಸ್ಥೆಯ ಗುರಿ ಹಾಗೂ ಕಾರ್ಯವೈಖರಿ ಕುರಿತು ಮಾಹಿತಿ ನೀಡಿದರು.
ಈ ವೇಳೆ ಡಾ.ಪ್ರೀತಿ ಮೇದಾರ, ಡಾ.ಬಾಬುರಾವ ಗೋಗಲೆ, ಡಾ.ನಿಶಾಂತ ಜಂಬಗಿ ಅವರು ಸಂಸ್ಥೆಯ ಸೇವೆಗಳ ಬಗ್ಗೆ ಮಾತನಾಡಿದರು . ವೇದಿಕೆಯಲ್ಲಿ ಬಸವರಾಜ ನಾಗರಾಳೆ, ರವಿ ಸುತಾರ, ರಾಜು ನಾಶಿಪುಡಿ ಉಪಸ್ಥಿತರಿದ್ದರು.
ಶುಭಾಂಗಿ ವಿಭೂತೆ ನೂತನ ಕಾರ್ಡ್ ಕುರಿತು ವಿವರಿಸಿ ವಂದನಾರ್ಪಣೆ ಸಲ್ಲಿಸಿದರು.

