ಹಿಂಡಲಗಾ ಜೈಲಿನಿಂದ ವಿಲ್ಸನ್ ಗಾರ್ಡನ್ ನಾಗ ಬಿಡುಗಡೆ
ಬೆಳಗಾವಿ : ಅನೇಕ ಅಪರಾಧ ಕೃತ್ಯಗಳಲ್ಲಿ ತೊಡಗಿ ಜೈಲು ಸೇರಿದ್ದ ನಟೋರಿಯಸ್ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗರಾಜ್ (ಅಲಿಯಾಸ್) ನಾಗ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಸಿದ್ದಾಪುರದ ಮಹೇಶ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಾಗ ಈ ಹಿಂದೆ ದರ್ಶನ್ ಜೊತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಟೀ ಹಾಗೂ ಸಿಗರೆಟ್ ಹಿಡಿದು ಸುದ್ದಿಯಾಗಿದ್ದ.
ಇದಾದ ನಂತರ ಈತನನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಹೈಕೋರ್ಟ್ ನಿಂದ ಜಾಮೀನು ಪಡೆದಿದ್ದು ಸಧ್ಯ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿದ್ದಾನೆ.

