ಮಹಾರಾಷ್ಟ್ರ : ಮಗಳ ಕೈ ಹಿಡಿದು ವರನಿಗೆ ಒಪ್ಪಿಸಿದ ಕೆಲವೇ ಕ್ಷಣಗಳಲ್ಲಿ‌ ತಂದೆ ಹೃದಯಾಘಾತದಿಂದ ಮೃತಪಟ್ಟ ‌ಘಟನೆ‌ ಮಹಾರಾಷ್ಟ್ರದ ಸಿಂಧ್ ಖೇಡ್ ರಾಜಾ ತಾಲೂಕಿನ ವರ್ದಾದಿಯಲ್ಲಿ ನಡೆದಿದೆ.

ವರ್ದಾದಿ ನಿವಾಸಿ ಕುರುಮದಾಸ್ ಭೂತೇಕರ್ ಅವರ ಪುತ್ರ ನಂದಿನಿ ಹಾಗೂ ಜಲ್ನಾ ಜಿಲ್ಲೆಯ ಪ್ರದೀಪ್ ನಾನೋಟೆ ಅವರ ವಿವಾಹ ಕಾರ್ಯಕ್ರಮ ಗುರುವಾರ ಸಂಜೆ ವಿಜೃಂಭಣೆಯಿಂದ ಜರುಗಿತ್ತು. ಶಾಸ್ತ್ರದಂತೆ ಕುರುಮದಾಸ್ ಮಗಳ ಕನ್ಯಾದಾನ ಮುಗಿಸಿ ಆಕೆಯ ಕೈ ಅನ್ನು ಅಳಿಯನ ಕೈ‌ ಮೇಲೆ ಇಟ್ಟಾಗ ಎದೆನೋವು ಕಾಣಿಸಿಕೊಂಡಿದ್ದು ಕುಸಿದುಬಿದ್ದರು.

ಮೊದಲಿಗೆ ತಲೆ ಸುತ್ತಿನಿಂದ ಹೀಗೆ ಆಗಿರಬಹುದು ಎಂದು ತಿಳಿದರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಹೋಗುವ ಮೊದಲೇ ಕುರುಮದಾಸ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಇತ್ತ ಸಂಭ್ರಮದಿಂದ ನಡೆದ ಮದುವೆಯಲ್ಲಿ‌ ಸೂತಕ ಆವರಿಸಿದೆ. ಆದರೆ ಕುರುಮದಾಸ್ ಆಸೆಯಂತೆ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದಾರೆ. ಸಂಡಗರ ಇರಬೇಕಿದ್ದ ಮನೆಯಲ್ಲಿ ಸಧ್ಯ ನೀರವ ಮೌನ ಆವರಿಸಿದ್ದು ವಿಪರ್ಯಾಸವೇ ಸರಿ.