Select Page

Advertisement

ಟ್ರೆಕ್ಕಿಂಗ್ ತೆರಳಿದ್ದ ಬಾಲಕಿ ಶವವಾಗಿ ಪತ್ತೆ..!

ಟ್ರೆಕ್ಕಿಂಗ್ ತೆರಳಿದ್ದ ಬಾಲಕಿ ಶವವಾಗಿ ಪತ್ತೆ..!



ಚಿಕ್ಕಮಗಳೂರು : ಚಂದ್ರದ್ರೋಣ ಪರ್ವತಕ್ಕೆ ಟ್ರೆಕ್ಕಿಂಗ್ ತೆರಳಿ ನಾಪತ್ತೆಯಾಗಿದ್ದ ಬಾಲಕಿ ಶ್ರೀನಂದಾ ಶವವಾಗಿ ಪತ್ತೆಯಾಗಿದ್ದಾಳೆ.‌ ಕಳೆದ ಮೂರು ದಿನಗಳಿಂದ ನಿರಂತರ ಹುಡುಕಾಟ ಮಾಡಲಾಗಿತ್ತು.‌

ಸುಮಾರು 2 ಸಾವಿರ ಅಡಿ ಎತ್ತರದಿಂದ ಶ್ರೀನಂದಾ ಬಿದ್ದು ಸಾವಣಪ್ಪಿರುವುದಾಗಿ ತಿಳಿದುಬಂದಿದೆ. ಈ ಕುರಿತು ತಮ್ಮ ಮಗಳ ನಾಪತ್ತೆ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು.

ಕೇರಳ ನಿವಾಸಿಯಾಗಿದ್ದ 14 ವರ್ಷದ ಶ್ರೀನಂದಾ ಪೋಷಕರ ಜೊತೆ ಚಾರಣಕ್ಕೆ ಬಂದ ವೇಳೆ ಕಾಣೆಯಾಗಿದ್ದಳು. ಶೋಧ ಕಾರ್ಯದ ವೇಳೆ ಮೃತದೇಹ ಪತ್ತೆಯಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!