ಸವದತ್ತಿ : ಬಸ್ ಹತ್ತುವಾಗ ಚಕ್ರಕ್ಕೆ ಸಿಲುಕಿ ಬಾಲಕಿ ಕೈ ತುಂಡು ; ಆಸ್ಪತ್ರೆಗೆ ದಾಖಲು – Video
ಸವದತ್ತಿ : ಬಸ್ ಹತ್ತುವ ವೇಳೆ ಆಯತಪ್ಪಿ ಚಕ್ರಕ್ಕೆ ಸಿಲುಕಿ ಬಾಲಕಿ ಕೈ ತುಂಡಾದ ಘಟನೆ ಸವದತ್ತಿ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದಿದೆ.
ಬಾದಾಮಿ ತಾಲೂಕು ಚೊಳಚಗುಡ್ಡದ ಧನ್ಯ ಹಿರೇಮಠ (03) ಬಾಲಕಿ ಪೋಷಕರ ಜೊತೆ ಬಸ್ ಹತ್ತುವ ವೇಳೆ ಆಯತಪ್ಪಿ ಬಸ್ ಚಕ್ರಕ್ಕೆ ಸಿಲುಕಿದ್ದಾಳೆ.
ಈ ವೇಳೆ ಬಾಲಕಿ ಕೈ ತುಂಡಾಗಿದ್ದು, ಕಾಲಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

