Select Page

Advertisement

ಈರಣ್ಣ ಬಣಜಗಿ ಅಧ್ಯಕ್ಷ, ಶೇಖರ ಕಲ್ಲೂರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

ಈರಣ್ಣ ಬಣಜಗಿ ಅಧ್ಯಕ್ಷ, ಶೇಖರ ಕಲ್ಲೂರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ



ಚನ್ನಮ್ಮನ ಕಿತ್ತೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಮುಂದಿನ ಮೂರು ವರ್ಷಗಳ ಅವಧಿಗಾಗಿ ಸೋಮವಾರ ನಡೆದ ಚುನಾವಣೆಯಲ್ಲಿ ಈರಣ್ಣ ಬಣಜಗಿ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಯಾದರು, ಉಪಾಧ್ಯಕ್ಷರಾಗಿ ಇದೇ ಮೊದಲ ಬಾರಿ ಶಿವಾನಂದ ವಿಭೂತಿಮಠ ಚುನಾಯಿತರಾದರು.
ಶೇಖರ ಕಲ್ಲೂರ ಪ್ರಧಾನ ಕಾರ್ಯದರ್ಶಿ, ಸೋಮಶೇಖರ ಕುಪ್ಪಸಗೌಡರ ಖಜಾಂಚಿಯಾಗಿ ಸರ್ವಾನುಮತದಿಂದ ಚುನಾಯಿತರಾದರು.

ಚುನಾವಣಾಧಿಕಾರಿ ಜಿ. ಕೆ. ಪೂಜಾರ ಈ ಅವಿರೋಧ ಆಯ್ಕೆಗಳನ್ನು ಘೋಷಣೆ ಮಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಶೈಲ್ ಮಠದ ವೀಕ್ಷಕರಾಗಿ ಆಗಮಿಸಿದ್ದರು, ಜಿಲ್ಲಾ ಪ್ರತಿನಿಧಿಗಳಾದ ಉಳವಯ್ಯ ಹಿರೇಮಠ, ರುದ್ರೇಶ ಸಂಪಗಾಂವಿ, ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಶಿವಾನಂದ ತಾರಿಹಾಳ, ಮಹಾರುದ್ರ ಮಹಾಲ್ಮನಿ, ಸದಸ್ಯ ಅದೃಶ್ಯ ಬಣಜಗಿ ಇದ್ದರು.

ಇದೇ ಸಂದರ್ಭದಲ್ಲಿ ಖಾನಾಪುರ ತಾಲ್ಲೂಕು ಘಟಕದ ಚುನಾವಣೆಯೂ ನಡೆಯಿತು. ಅಧ್ಯಕ್ಷರಾಗಿ ಪ್ರಸನ್ನ ಕುಲಕರ್ಣಿ, ಭರತ ಪಾಟೀಲ ಉಪಾಧ್ಯಕ್ಷ, ಕಿಶೋರ ಮಿಠಾರಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಕಾಸೀಂ ಹಟ್ಟಿಹೊಳಿ ಇದ್ದರು.







Advertisement

Leave a reply

Your email address will not be published. Required fields are marked *

error: Content is protected !!