ಬೆಳಗಾವಿ : 2016 – 17 ರ ಅವಧಿಯಲ್ಲಿ ಉತ್ತರ ವಲಯದ ಐಜಿಪಿಯಾಗಿ ರಾಮಚಂದ್ರ ರಾವ್ ಕರ್ತವ್ಯ ನಿರ್ವಹಿಸುವ ವೇಳೆ ಮಹಿಳೆಯರೊಂದಿಗೆ ಕಚೇರಿಯಲ್ಲೇ ಪೋಲಿ ಆಟ ಆಡಿದ್ದು ನಿಜ ಎಂಬುದು ತನಿಖೆಯಿಂದ ಬಯಲಾಗಿದೆ.

ಸಮವಸ್ತ್ರದ ಮೇಲೆ ಕರ್ತವ್ಯ ನಿರ್ವಹಿಸುವ ವೇಳೆ ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತಿಸಿದ ವೀಡಿಯೋ ವೈರಲ್ ಆಗಿ ಕರ್ತವ್ಯದಿಂದ ಅಮಾನತುಗೊಂಡ ಡಿಜಿಪಿ ರಾಮಚಂದ್ರ ರಾವ್ ಪ್ರಕರಣ ತನಿಖೆಯಿಂದ ಮಹತ್ವದ ಅಂಶ ಬೆಳಕಿಗೆ ಬಂದಿದೆ.

ವೈರಲ್ ಆದ ವೀಡಿಯೋ ಎಐ ಸೃಷ್ಟಿ ಎಂದು ರಾಮಚಂದ್ರ ರಾವ್ ವಾದಿಸಿದ್ದ. ಆದರೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ನೀಡಿದ್ದು ಇದು ಎಐ ಸೃಷ್ಟಿ ಯಲ್ಲ.‌ ಅಶ್ಲೀಲ ವೀಡಿಯೋ ನೈಜವಾಗಿವೆ ಎಂದು ವರದಿ ನೀಡಿದೆ‌.

ಬೆಳಗಾವಿ ಮೂಲದ ಒಬ್ಬರು ಮಹಿಳೆರು ಆಗಾಗ್ಗೆ ಐಜಿಪಿ ಕಚೇರಿಗೆ ಬಂದು ಹೋಗುತ್ತಿದ್ದರು. ಈ ವೇಳೆ ಒಬ್ಬ ಮಹಿಳೆ ರಾಮಚಂದ್ರ ರಾವ್ ಜೊತೆ ಸರಸಕ್ಕೆ ನಿಂತರೆ ಪಕ್ಕದಲ್ಲಿದ್ದ ಒನ್ನೋರ್ವ ಮಹಿಳೆ ವೀಡಿಯೋ ಮಾಡುತ್ತಿದ್ದಳು.

ಇನ್ನು ಮಹಿಳೆಯರ ಗುರುತನ್ನು ರಾಮಚಂದ್ರ ರಾವ್ ಅವರ ಕಾರು ಚಾಲಕ ಗುರುತಿಸಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ನೈಜ ಎಂದು ತನಿಖೆಯಿಂದ ಬಯಲಾಗಿದೆ.