ಹಾರೂಗೇರಿ : ಭೀಕರ ರಸ್ತೆ ಅಪಘಾತ, ಮೂವರು ಸಾವು
ಬೆಳಗಾವಿ : ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ಸೋಮವಾರ ತಡರಾತ್ರಿ ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ನಡೆದಿದೆ.
ಗಜಾನನ ವಡೆಯರ್ (22), ಮಹಾದೇವ ಗೊಲಬಾವಿ (22) ಮಾಳಪ್ಪ ಗೊಲಬಾವಿ(26) ಮೂವರು ಮೃತಪಟ್ಟಿದ್ದಾರೆ.
ಹಾರೂಗೇರಿಯ ರಹಮಾನ್ ದಾಬಾ ಹತ್ತಿರ ಬೈಕ್ ಮೇಲೆ ಮೂವರು ಮುಗಳಖೋಡ ಮಾರ್ಗವಾಗಿ ತೆರಳುವ ವೇಳೆ ಅಪರಿಚಿತ ವಾಹನ ಅಪಘಾತ ಪಡಿಸಿ ಪರಾರಿಯಾಗಿದೆ.
ಘಟನೆಯಲ್ಲಿ ಸ್ಥಳದಲ್ಲೆ ಗಜಾನನ ಹಾಗೂ ಮಹಾದೇವ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಮಾಳಪ್ಪ ಗೊಲಬಾವಿಯನ್ನು ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.
ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


