Savadatti – ಹತ್ಯೆಗೈದು ಹೆಣದ ಮೇಲೆ ಕಾಲಿಟ್ಟು ಪೋಸ್ ; ಅನೈತಿಕ ಸಂಬಂಧಕ್ಕೆ ಬಿತ್ತು ಹೆಣ…!
ಬೆಳಗಾವಿ : ತಾಯಿಯ ಜೊತೆ ಸಲುಗೆಯಿಂದ ಇದ್ದಿದ್ದಕ್ಕೆ ಸಿಟ್ಟಿಗೆದ್ದ ಯುವಕ ವ್ಯಕ್ತಿಯನ್ನು ಭೀಕರವಾಗಿ ಹತ್ಯೆಗೈದು ಹೆಣದ ಮೇಲೆ ಕಾಲಿಟ್ಟು ಪೋಸ್ ಕೊಟ್ಟ ಘಟನೆ ಸವದತ್ತಿ ತಾಲೂಕಿನ ಬಸಿಡೋಣಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಬಸವರಾಜ ಹೊಸಮನಿ (49) ಕೊಲೆಯಾದ ವ್ಯಕ್ತಿ. ಈತ ಅದೇ ಗ್ರಾಮದ ಮಹಿಳೆ ಜೊತೆ ಸಲುಗೆಯಿಂದ ವರ್ತಿಸುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಮಹಿಯ ಮಗ ಈರಯ್ಯ ಮಠಪತಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಮಾಡಿದ್ದಾನೆ.
ಹೂಲಿಕಟ್ಟಿ ಗ್ರಾಮದ ಸವದತ್ತಿ – ರಾಮದುರ್ಗ ರಸ್ತೆ ಮಾರ್ಗದಲ್ಲಿ ಬಸವರಾಜ ಹೊಸಮನಿ ಬೈಕ್ ಅಡ್ಡಗಟ್ಟಿ ಈರಯ್ಯ ಚಾಕುವಿನಿಂದ ಹಾಕಿ ಕೊಲೆಗೈದು, ನಂತರ ಆತನ ಶವದ ಮೇಲೆ ಕಾಲಿಟ್ಟು ಪೋಸ್ ಕೊಟ್ಟಿದ್ದಾನೆ.
ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


