ಮಹಾರಾಷ್ಟ್ರದ ಜನಪ್ರಿಯ ನಾಯಕನ ದುರಂತ ಅಂತ್ಯ…!

ಬೆಳಗಾವಿ : ಅಜಿತ್ ದಾದಾ ಪವಾರ್. Ajit DADA Pawar ಮಹಾರಾಷ್ಟ್ರ ರಾಜಕಾರಣದಲ್ಲಿ ಸುಮಾರು ನಾಲ್ಕು ದಶಕಗಳಿಂದ ಹೆಚ್ಚಿಗೆ ಈ ಹೆಸರು ಜನಮಾನಸದಲ್ಲಿ ಉಳಿದುಕೊಂಡಿದೆ. ಶರದ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡು ಕೊನೆಗೆ ಚಿಕ್ಕಪ್ಪನ ಮಾತು ಮೀರಿ ಪಕ್ಷವನ್ನು ಇಬ್ಬಾಗ ಮಾಡುವುದರ ಜೊತೆಗೆ ದೀರ್ಘಕಾಲ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ನಾಯಕ ಇವರು.
ಪ್ರಸ್ತುತ ಬಿಜೆಪಿ ನೇತೃತ್ವದ ದೇವೇಂದ್ರ ಫಡ್ನವಿಸ್ ಸರಕಾರದಲ್ಲಿ ಎನ್ ಸಿ ಪಿ ನಾಯಕ ಅಜಿತ್ ಪವಾರ್ ಉಪಮುಖ್ಯಮಂತ್ರಿ ಸ್ಥಾನ ಹೊಂದಿದ್ದರು. ಕಳೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟದ ಜೊತೆ ಗುರುತಿಸಿಕೊಂಡಿದ್ದ ಇವರು 41 ಸ್ಥಾನ ಗೆಲ್ಲುವುದರ ಮೂಲಕ ಬಿಜೆಪಿ ಮೈತ್ರಿಕೂಟದ ಶಕ್ತಿ ಹೆಚ್ಚಿಸಿದ್ದರು.
ಈವರೆಗೆ 6 ಬಾರಿ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವ ಅಜಿತ್ ಪವಾರ್ ಅವರು ನಿರಂತರವಾಗಿ ಪುಣೆಯ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ 1991 ರಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ದುರಂತವೆಂದರೆ ಇಂದು ಸಂಭವಿಸಿದ್ದ ಭೀಕರ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮೊದಲ ರಾಜಕೀಯ ಜೀವನವನ್ನು ಸಿಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯಿಂದ ಪ್ರಾರಂಭಿಸಿದ್ದ ಇವರು ನಂತರ ಪುಣೆಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಹುದ್ದೆ ಅಲಂಕರಿಸಿದದ್ದರು. ತಳಮಟ್ಟದಿಂದ ನಾಯಕರಾಗಿ ಬೆಳೆದ ಅಜಿತ್ ಪವಾರ್ ಮಹಾರಾಷ್ಟ್ರದ ಜನಪ್ರಿಯ ನಾಯಕರಲ್ಲಿ ಒಬ್ಬರು.

