ಜಾಲತಾಣಗಳ ದುರ್ಬಳಕೆ ಮಾಡಿದರೆ ಕಠಿಣ ಕ್ರಮ : ಡಿವೈಎಸ್ಪಿ ಖಡಕ್ ಎಚ್ಚರಿಕೆ

ಅಥಣಿ : ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವುದು ಹಾಗೆಯೇ ಅಸಭ್ಯ ಪ್ರತಿಕ್ರಿಯೆ ಹಾಕುವ ಮೂಲಕ ವ್ಯಕ್ತಿಗಳ ತೇಜೋವಧೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಂತವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಸಂದೇಶ ನೀಡಿರುವ ಇವರು, ಮಾಹಿತಿ ವಿನಿಮಯಕ್ಕೆ ಸಾಮಾಜಿಕ ಜಾಲತಾಣ ಉತ್ತಮ ವೇದಿಕೆಯಾಗಿದ್ದು ಇದನ್ನು ಸರಿ ದಾರಿಯಲ್ಲಿ ಸಾರ್ವಜನಿಕರು ಉಪಯೋಗ ಪಡಿಸಿಕೊಳ್ಳಬೇಕು ಎಂದರು.
ವ್ಯಕ್ತಿಗಳ ಅನುಮತಿ ಇಲ್ಲದೆ ಅವರ ಭಾವಚಿತ್ರ ಹಾಗೂ ವೀಡಿಯೋ ಬಳಸುವುದು, ಸರಕಾರ ಹಾಗೂ ದೇಶದ ವಿರುದ್ಧ ದ್ವೇಷ ಹರಡುವ ಸಂದೇಶ ಹಂಚಿಕೊಳ್ಳುವುದು ಕಾನೂನು ರೀತಿಯಲ್ಲಿ ಅಪರಾಧವಾಗಿದೆ. ಸುಳ್ಳು ಸುದ್ದಿಗಳನ್ನು ಹರಡಿ ಪ್ರಚೋದನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

