ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಹನುಮಮ್ಮ
ಸಿಂಧನೂರು : ರಾಜ್ಯದ ಕಾಂಗ್ರೆಸ್ ಸರ್ಕಾರ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆ ಗ್ರಾಮೀಣ ಭಾಗದ ಮನೆಗಳಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
ಕಾರಣ ತಾಲೂಕಿನ ಉಪ್ಪಲದೊಡ್ಡಿ ಗ್ರಾಮದ ನಿವಾಸಿ ಹನುಮಮ್ಮ ಗಂಡ ದುರುಗಪ್ಪ ನಡುಲುಮನಿ ಅವರು, ತಮಗೆ ಪ್ರತಿ ತಿಂಗಳು ಬರುತ್ತಿದ್ದ 2 ಸಾವಿರ ಗೃಹಲಕ್ಷ್ಮಿ ಹಣ ಉಳಿತಾಯ ಮಾಡಿ ಇಂದು ತಮ್ಮ ಮನೆಗೆ ಒಂದು ಹೊಸ ಫ್ರಿಡ್ಜ್ ಖರೀದಿಸುವ ಮೂಲಕ ಆರ್ಥಿಕ ಸಬಲೀಕರಣದ ಹಾದಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಸಂಸದ ರಾಜಶೇಖರ್ ಹಿಟ್ನಾಳ್ ಹಾಗೂ ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ, ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಹಾಗೂ ಯುವ ನಾಯಕ ಆರ್.ಸಿದ್ದನಗೌಡ ತುರ್ವಿಹಾಳರವರ ಸಮರ್ಥ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷದ ಭರವಸೆಗಳು ಹೇಗೆ ಸಾಮಾನ್ಯ ಜನರ ಬದುಕಿನಲ್ಲಿ ಹೆಮ್ಮೆಯ ಬೆಳಕು ತರುತ್ತಿವೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ.
ಇಂತಹ ಅದ್ಭುತ ಯೋಜನೆಯನ್ನು ಜಾರಿಗೆ ತರಲು ಕಾರಣಿಕರ್ತರಾಗಿ ಶ್ರಮಿಸಿದ ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕದ ಎಲ್ಲಾ ನಾಯಕರಿಗೆ ಈ ಮೂಲಕ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗುತ್ತಿದೆ. ಸರ್ಕಾರದ ಹಣವನ್ನು ಅತ್ಯಂತ ಜಾಣ್ಮೆಯಿಂದ ಸದುಪಯೋಗಪಡಿಸಿಕೊಂಡು,
ತಮ್ಮ ಮನೆಯ ದಶಕಗಳ ಕನಸನ್ನು ನನಸು ಮಾಡಿಕೊಂಡ ಹನುಮಮ್ಮನವರ ಸಾಧನೆ ಸ್ತ್ರೀಶಕ್ತಿಯ ಗೌರವವನ್ನು ಎತ್ತಿ ಹಿಡಿದಿದ್ದು, ಇದು ಇಡೀ ನಾಗರಿಕ ಸಮಾಜವೇ ಹೆಮ್ಮೆ ಪಡುವಂತಹ ಮತ್ತು ಕೃತಜ್ಞತೆ ಸಲ್ಲಿಸಬೇಕಾದ ಕ್ಷಣವಾಗಿದೆ.
ಬೆಲೆ ಏರಿಕೆಯ ಈ ಕಾಲದಲ್ಲಿ ಪ್ರತಿ ತಿಂಗಳು ಸಿಗುವ 2 ಸಾವಿರ ಸಾಮಾನ್ಯ ಕುಟುಂಬಕ್ಕೆ ಹಾಲಿನ ಬಿಲ್, ತರಕಾರಿ ಅಥವಾ ಮಕ್ಕಳ ಸಣ್ಣಪುಟ್ಟ ಶಾಲಾ ಖರ್ಚುಗಳನ್ನು ನಿಭಾಯಿಸಲು ದೊಡ್ಡ ಶಕ್ತಿಯಾಗಿದೆ. ನೇರ ನಗದು ವರ್ಗಾವಣೆ (ಡಿಬಿಟಿ) ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ, ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಹಣ ತಲುಪುತ್ತಿರುವುದು ಸರ್ಕಾರದ ಪಾರದರ್ಶಕತೆಗೆ ಸಾಕ್ಷಿ.
ಮಹಿಳೆಯರ ಕೈಗೆ ಹಣ ಬಂದಾಗ ಮಾರುಕಟ್ಟೆಯಲ್ಲಿ ಖರ್ಚಾಗುತ್ತದೆ, ಇದರಿಂದ ಸ್ಥಳೀಯ ಆರ್ಥಿಕತೆಗೂ ಚೈತನ್ಯ ಸಿಗುತ್ತದೆ. ಟೀಕೆಗಿಂತ ಕೆಲಸ ಮುಖ್ಯ, ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ವಿರೋಧ ಪಕ್ಷದವರು ಭವಿಷ್ಯ ನುಡಿದಿದ್ದರು. ಆದರೆ ಇಂದು ರಾಜ್ಯದ ಕೋಟ್ಯಂತರ ಮಹಿಳೆಯರು ಇದರ ಲಾಭ ಪಡೆಯುತ್ತಿದ್ದಾರೆ.
ಟೀಕೆ ಮಾಡುವ ಮೊದಲು ಜನರ ಮುಖದಲ್ಲಿರುವ ನೆಮ್ಮದಿಯನ್ನು ನೋಡಬೇಕು. ರಾಜ್ಯ ದಿವಾಳಿಯಾಗುತ್ತೆ ಎಂದು ಹೇಳಿದ್ದರು. ಯೋಜನೆಗಳು ನಡೆಯುತ್ತಿವೆ, ರಾಜ್ಯದ ಪ್ರಗತಿಯೂ ಸಾಗುತ್ತಿದೆ. ನಿಮ್ಮ ಆಡಳಿತದಲ್ಲಿ ಜನಸಾಮಾನ್ಯರಿಗೆ ಇಂತಹ ನೇರ ಪ್ರಯೋಜನ ಏಕೆ ಸಿಗಲಿಲ್ಲ.
ಮೀಸಲು ಕ್ಷೇತ್ರದ ತೀಡಿಗೋಳ-ವಿರುಪಾಪುರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಜಿಲ್ಲಾ ಪಂಚಾಯತ್ ಟಿಕೆಟ್ ಆಕಾಂಕ್ಷಿ, ವೀರೇಶ ಎನ್.ಉಪ್ಪಲದೊಡ್ಡಿ,


