ಜಾರಕಿಹೊಳಿ ಸಹೋದರರಿಂದ ಸವದಿಗೆ ಮಾಸ್ಟರ್ ಸ್ಟ್ರೋಕ್..! ಸೇಡು ತೀರಿಸಿಕೊಂಡ ರಮೇಶ್ ಜಾರಕಿಹೊಳಿ
ಬೆಳಗಾವಿ : ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಮತ್ತೊಮ್ಮೆ ಜಾರಕಿಹೊಳಿ ಸಹೋದರರು ಮಾಸ್ಟರ್ ಸ್ಟ್ರೋಕ್ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಬಿಡಿಸಿಸಿ ಬ್ಯಾಂಕ್ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದ್ದಂತೆ ಮಹತ್ವದ ಬದಲಾವಣೆ ಮಾಡಿಕೊಂಡಿದ್ದಾರೆ.
ಕಳೆದ ಹದಿನೈದು ವರ್ಷಗಳಿಂದ ಬಿಡಿಸಿಸಿ ಬ್ಯಾಂಕ್ ಅಥಣಿ ಶಾಖೆಯ ವ್ಯವಸ್ಥಾಪಕ ( ಮ್ಯಾನೆಂಜರ್ ) ಹುದ್ದೆಯಲ್ಲಿದ್ದ ಲಕ್ಷ್ಮಣ ಸವದಿ ಅಳಿಯ ಶಂಕರ ನಂದೇಶ್ವರ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡುವ ಮೂಲಕ ಜಾರಕಿಹೊಳಿ ಸಹೋದರರು ಸವದಿಗೆ ಶಾಕ್ ನೀಡಿದ್ದಾರೆ.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆ ಪೂರ್ವದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಥಣಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಅಥಣಿ ಡಿಸಿಸಿ ಬ್ಯಾಂಕಿನ ಮ್ಯಾನೆಂಜರ್ ನನ್ನು ಬದಲಾಯಿಸುತ್ತೇವೆ ಎಂದು ತಮ್ಮ ಕಾರ್ಯಕರ್ತರಿಗೆ ತಿಳಿಸಿದ್ದರು.
ಕೊನೆಗೂ ರಮೇಶ್ ಜಾರಕಿಹೊಳಿ ಲಕ್ಷ್ಮಣ ಸವದಿ ವಿರುದ್ಧ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಥಣಿ ಬಿಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಸ್ಥಾನಕ್ಕೆ ಸಧ್ಯ ಅರ್ಜುನ್ ಖಾನಾಪುರೆ ಎಂಬುವವರನ್ನು ನೇಮಕ ಮಾಡಿದ್ದು ಲಕ್ಷ್ಮಣ ಸವದಿಗೆ ಇರುಸುಮುರುಸು ತರಿಸಿದೆ.
ಇನ್ನೂ ಈ ಕುರಿತು ಅಥಣಿ ತಾಲೂಕಿನ ಪಿಕೆಪಿಎಸ್ ಗಳ ನಿಯೋಗ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜು ಕಾಗೆ ಅವರನ್ನು ಭೇಟಿಮಾಡಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಇವರು, ಲಕ್ಷ್ಮಣ ಸವದಿಯನ್ನು ಕಾಡಲೇಂದೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳುವ ಮೂಲಕ ಜಾರಕಿಹೊಳಿ ಸಹೋದರರತ್ತ ಕೈ ತೋರಿಸುವ ಕೆಲಸ ಮಾಡಿದ್ದಾರೆ.
ಚಲಿಸುತ್ತಿರುವ ರೈಲಿನಲ್ಲೇ ಮೈ ಮರೆತ ಜೋಡಿ ; ಖುಲ್ಲಂಖುಲ್ಲಾ ಸೆಕ್ಸ್….! https://belagavivoice.com/metro/


