ಬೆಳಗಾವಿ : ಶೀಘ್ರದಲ್ಲೇ ಚಿಕ್ಕೋಡಿಯನ್ನು ಹೊಸ ಜಿಲ್ಲೆಯಾಗಿ ಮಾಡಲಾಗುತ್ತದೆ ಎಂದು ಚಿಕ್ಕೋಡಿ ನ್ಯಾಯಾಲಯದ ಕಟ್ಟಡ ಸಂಕೀರ್ಣ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಹೆಚ್.ಕೆ ಪಾಟೀಲ್ ಮಹತ್ವದ ಸುಳಿವು ನೀಡಿದ್ದಾರೆ.

ಚಿಕ್ಕೋಡಿ ಜಿಲ್ಲೆಯಾಗಲು ಬಹಳ ದಿನವಿಲ್ಲ. ಮುಂದಿನ ಹೆಜ್ಜೆ ಇಡಲು ಬೇಗ ಪ್ರಕ್ರಿಯೆ ಆರಂಭ ಆಗಬಹುದು. ಈ ಕುರಿತು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಸಭೆ ನಡೆಸಿದ್ದಾರೆ ಎಂದರು.

ಸಚಿವ ಸತೀಶ್ ಜಾರಕಿಹೊಳಿ ಚಿಕ್ಕೋಡಿ ಹಾಗೂ ಗೋಕಾಕ್ ಜನರ ಜೊತೆ ಸಭೆ ನಡೆಸಿದ್ದಾರೆ. ಶೀಘ್ರದಲ್ಲೇ ಚಿಕ್ಕೋಡಿ ಜಿಲ್ಲಾ ಘೋಷಣೆ ಆಗುವ ಸಾಧ್ಯತೆ ಇದೆ ಎಂಬ ಕುತೂಹಲ ಹೆಚ್ಚಿಸಿದೆ.