ಬೆಳಗಾವಿ : ತಾಲೂಕು ಕೇಂದ್ರದಲ್ಲಿ ನಕಲಿ ಪತ್ರಕರ್ತರ ಹಾವಳಿ ಕುರಿತು ಇಂದು ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದ್ದು ಮಾಡಿತು. ಈ ಕುರಿತು ಸಮಿತಿ ಸದಸ್ಯರು ಸಭೆ ಗಮನಸೆಳೆದರು.
ತಾಲೂಕು ಕೇಂದ್ರಗಳಲ್ಲಿ ನಕಲಿ ಪತ್ರಕರ್ತರ ಹಾವಳಿಯಿಂದಾಗಿ ಅಧಿಕಾರಿಗಳಿಗೆ ಕಚೇರಿ ಕಾರ್ಯನಿರ್ವಹಣೆಗೆ ತುಂಬ ತೊಂದರೆಯಾಗುತ್ತಿದ್ದು ನಕಲಿ ಪತ್ರಕರ್ತರನ್ನು ಗುರುತಿಸಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮಿತಿ ಸದಸ್ಯರು ಒತ್ತಾಯಿಸಿದರು.
ಪೊಲಿಸ್ ಆಯುಕ್ತರಾದ ಭೋರಸೆ ಗುಲಾಬರಾವ್ ಭೂಷಣ ಅವರು ಪ್ರತಿಕ್ರಿಯಿಸಿ ಈ ಕುರಿತು ಕ್ರಮ ವಹಿಸಲಾಗುವುದು ಎಂದರು.
ಈ ವೇಳೆ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಂಸದ ಈರಣ್ಣ ಕಡಾಡಿ, ಶಾಸಕ ರಾಜು ಕಾಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕೆಡಿಪಿ ಸಭೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಕುರಿತು ಸದ್ದು ; ಕ್ರಮಕ್ಕೆ ಸದಸ್ಯರ ಒತ್ತಾಯ..!


