ವರ್ಷಪೂರ್ತಿ ಕನ್ನಡ ಹಬ್ಬ ಆಚರಿಸುವಂತಾಗಲಿ : ಜೆ.ಎಸ್ ಸಂತೋಷ್
ಬೆಂಗಳೂರು : ಕೇವಲ ನವೆಂಬರ್ 1 ಕ್ಕೆ ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸದೆ ವರ್ಷಪೂರ್ತಿ ಕನ್ನಡ ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡರೆ ಮಾತ್ರ ನಿಜವಾದ ಆಚರಣೆಯಾಗುತ್ತದೆ ಎಂದು ಎ ಕಿಡ್ಜ್ ಫ್ರೀ ಸ್ಕೂಲ್
ಪ್ರಾಂಶುಪಾಲರಾದ ಜೆ.ಎಸ್ ಸಂತೋಷ್ ಅಭಿಪ್ರಾಯಪಟ್ಟರು.
ನಗರದ ಅತ್ತಿಬೆಲೆ ಎ ಕಿಡ್ಜ್ ಫ್ರೀ ಸ್ಕೂಲ್ ನಲ್ಲಿ ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಇವರು. ಮಕ್ಕಳಿಗೆ ಬಾಲ್ಯದಲ್ಲೇ ನಾಡು, ನುಡಿ ಕುರಿತು ಅರಿವು ನೀಡಿದರೆ ಮುಂದೆ ಭವಿಷ್ಯದಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುತ್ತಾರೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಜಿಲ್ಲಾವಾರು ಪ್ರಸಿದ್ಧ ದೇವಸ್ಥಾನಗಳ ಕಿರುಚಿತ್ರ ಪ್ರದರ್ಶನ ಮಾಡಲಾಯಿತು. ಈ ವೇಳೆ ಮಕ್ಕಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


