ದರೂರ ಸೇತುವೆ ಬಂದ್ ಮಾಡಿದ ರೈತರು ; ಸಾರ್ವಜನಿಕರ ಪರದಾಟ
ಬೆಳಗಾವಿ : ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕಾವು ಹೆಚ್ಚುತ್ತಿದೆ. ಸಧ್ಯ ಅಥಣಿ – ಗೋಕಾಕ್ ಮುಖ್ಯ ರಸ್ತೆಯ ದರೂರ ಸೇತುವೆ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ದರೂರ ಸೇತುವೆ ಬಂದ್ ಆದ ಹಿನ್ನಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ನಿಂತಿದ್ದು ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೋಗಿಗಳಿಗೆ ಆಸ್ಪತ್ರೆಗೆ ಹೋಗಲು ತೊಂದರೆಯಾಗಿದ್ದು ಜನ ಹಿಡಿಶಾಪ ಹಾಕುತ್ತಿದ್ದಾರೆ.
ಅಥಣಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಇತ್ತ ಹಾರೂಗೇರಿ ಕ್ರಾಸ್, ಹಾರೂಗೇರಿ, ಹುಕ್ಕೇರಿ, ಗೋಕಾಕ್, ಸೇರಿದಂತೆ ಹಲವೆಡೆ ಪ್ರತಿಭಟನೆ ಜೋರಾಗಿದೆ.

