ಹುಕ್ಕೇರಿ : ಹೊರಗಿನವರು ಎಂದು ಹೇಳುತ್ತಾರೆ. ನಾವು ಮೂಲತಃ ಹುಕ್ಕೇರಿಯ ಜಾರಕಿಹೊಳಿ ಗ್ರಾಮದ ಗೌಡ್ರು, ನಾವು ಹೇಗೆ ಹೊರಗಿನವರು ಆಗುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ರಮೇಶ್ ಕತ್ತಿಗೆ ಕೌಂಟರ್ ಕೊಟ್ಟಿದ್ದಾರೆ.

ಜಾರಕಿಹೊಳಿ ಸಹೋದರರು ಹೊರಗಿನಿಂದ ಬಂದು ಹುಕ್ಕೇರಿಯಲ್ಲಿ ರಾಜಕಾರಣ ಮಾಡಲು ನಾವು ಬಿಡುವುದಿಲ್ಲ ಎಂದು ರಮೇಶ್ ಕತ್ತಿ ಹೇಳಿಕೆಗೆ ಕಂಟರ್ ಕೊಟ್ಟ ಇವರು. ನಾನು ಹೊರಗಿನವನಲ್ಲ‌ ಹುಕ್ಕೇರಿ ತಾಲೂಕಿನ ಜಾರಕಿಹೊಳಿ  ಗ್ರಾಮದ ಗೌಡ್ರು, ನಾವು ಹೇಗೆ ಹೊರಗಿನವರು ಆಗ್ತೆವೆ ಎಂದು ಟಾಂಗ್ ಕೊಟ್ಟಿದ್ದಾರೆ.

ನೂರಾರು ವರ್ಷಗಳ ಹಿಂದೆ, ನಮ್ಮ ಕುಂಟುಬ ಹುಕ್ಕೇರಿಯ ತಾಲೂಕಿನ ಜಾರಕಿಹೊಳಿ ಗ್ರಾಮದಲ್ಲಿ ನೆಲೆಸಿತ್ತು, ಅಲ್ಲಿ ನಮಗೆ ಗೌಡ್ರು (ಪಾಟೀಲ)ರು  ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು, ಕಾರಣಾತ್ತರದಿಂದ  ಜಾರಕಿಹೊಳಿ ಗ್ರಾಮದಿಂದ ಗೋಕಾಕ ನಾಡಿನಲ್ಲಿ ನಾವು ನೆಲೆಸಿದ ನಂತರ, ಅಲ್ಲಿನ ಜನ ನಮಗೆ ಗೌಡ್ರು ಎನ್ನುವ ಬದಲು ಜಾರಕಿಹೊಳಿ ಹೆಸರಿನಿಂದ ಗುರುತಿಸಿದರು.

ಅಂದಿನಿಂದ ಇಂದಿನಿಂದವರೆಗೆ ನಮಗೆ ಜಾರಕಿಹೊಳಿ ಎಂಬ ಹೆಸರು ರೂಢಿಯಲ್ಲಿದೆ.   ಮುಖ್ಯವಾಗಿ ಈಗಿರುವ ನಮ್ಮ ಆಧಾರ ಕಾರ್ಡ್‌, ಮತದಾನ ಕಾರ್ಡ್‌  ನಲ್ಲಿ ನಮ್ಮ ಹೆಸರು ಹುಕ್ಕೇರಿ  ತಾಾಲೂಕಿನ ಯಮಕನಮರಡಿ ಕ್ಷೇತ್ರದಲ್ಲಿ ದಾಖಲಾಗಿದೆ. ಹಾಗಾದರೆ ನಾವು ಹೇಗೆ  ಹೊರಗಿನವರು ಎಂದು ಪ್ರಶ್ನಿಸುವ ಮೂಲಕ ಎದುರಾಳಿಗಳಿಗೆ ಪ್ರತ್ಯುತ್ತರ ‌ನೀಡಿದರು.