ರೀಲ್ಸ್ ಮಾಡಲು ಧರ್ಮಸ್ಥಳಕ್ಕೆ ಬಂದಿದ್ದ ಪುಂಡರಿಗೆ ಒದೆ ಕೊಟ್ಟ ಸ್ಥಳೀಯರು..!
ಧರ್ಮಸ್ಥಳ : ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳ ಹೆಸರು ಕೆಡಿಸಲು ರೀಲ್ಸ್ ನೆಪದಲ್ಲಿ ಕ್ಷೇತ್ರಕ್ಕೆ ಬಂದು ಹುಚ್ಚರಂತೆ ವರ್ತನೆ ಮಾಡುತ್ತಿದ್ದವರಿಗೆ ಸ್ಥಳೀಯರು ಸರಿಯಾದ ಪಾಠ ಕಲಿಸಿದ್ದಾರೆ.
ಯೂಟ್ಯೂಬರ್ ಸಮೀರ್ ಪೋಟೋ ಹಿಡಿದು ಧರ್ಮಸ್ಥಳ ಕ್ಷೇತ್ರದಲ್ಲಿ ಓಡಾಡಿ ರೀಲ್ಸ್ ಮಾಡುತ್ತಿದ್ದ ಯುವಕರನ್ನು ತರಾಟೆಗೆ ತಗೆದುಕೊಂಡ ಸ್ಥಳೀಯರು ಕ್ಷೇತ್ರದ ಹೆಸರು ಕೆಡಿಸದಂತೆ ಬುದ್ದಿವಾದ ಹೇಳಿದ್ದು ಜೊತೆಗೆ ಸರಿಯಾಗಿ ಕಜ್ಜಾಯ ಕೊಟ್ಟಿದ್ದಾರೆ.
ಧರ್ಮಸ್ಥಳ ಗ್ರಾಮದ ಸ್ಥಳೀಯ ಆಟೋ ಚಾಲಕರು ಯುವಕರಿಗೆ ಸರಿಯಾಗಿ ಬುದ್ದಿ ಕಲಿಸಿದ್ದಾರೆ. ಅಷ್ಟೇ ಅಲ್ಲದೆ ಕ್ಷೇತ್ರದ ಹೆಸರು ಹಾಳು ಮಾಡುವ ಪುಂಡರಿಗೆ ಎಚ್ಚರಿಕೆ ನೀಡಿದ್ದಾರೆ.


