Select Page

Advertisement

ತಲೆತಗ್ಗಿಸಿ ಕಣ್ಣೀರಿಟ್ಟ ಕಾಮುಕ ಪಜ್ಜು ; ಇಂದು ಶಿಕ್ಷೆ ಪ್ರಮಾಣ ಪ್ರಕಟ

ತಲೆತಗ್ಗಿಸಿ ಕಣ್ಣೀರಿಟ್ಟ ಕಾಮುಕ ಪಜ್ಜು ; ಇಂದು ಶಿಕ್ಷೆ ಪ್ರಮಾಣ ಪ್ರಕಟ

ಬೆಂಗಳೂರು : ಅತ್ಯಾಚಾರ ಪ್ರಕರಣಕ್ಕೆ ಸಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಸಾಬೀತಾದ ಹಿನ್ನಲೆಯಲ್ಲಿ ಇಂದು ಕೋರ್ಟ್ ಶಿಕ್ಷೆ ಪ್ರಮಾಣ‌ ಪ್ರಕಟಿಸಲಿದೆ.

ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದ ಆರೋಪದ ಮೇಲೆ ಜೈಲು ಸೇರಿದ್ದ ಪ್ರಜ್ವಲ್ ರೇವಣ್ಣ ವಿರುದ್ಧ ನಿನ್ನೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದ್ದು ದೋಷಿ ಎಂದು ಸಾಬೀತುಪಡಿಸಿದೆ.

ನ್ಯಾಯಮೂರ್ತಿಗಳು ಆದೇಶ ನೀಡುವ ವೇಳೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ತಲೆ ಕೆಳಗೆ ಮಾಡಿ ಕಣ್ಣೀರು ಹಾಕಿದ್ದಾನೆ. ತಪ್ಪಿನ ಅರಿವಾಗುವ ಮೊದಲೇ ಕೋರ್ಟ್ ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.‌

ಇನ್ನೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಪ್ರಮಾಣ ಇಂದು ಪ್ರಕಟವಾಗಲಿದೆ. ಕನಿಷ್ಠ ಹತ್ತು ವರ್ಷ ಜೈಲು ಶಿಕ್ಷೆ ಆಗಲಿದ್ದು, ಗರಿಷ್ಠ ಜೀವಿತಾವಧಿ ವರೆಗೂ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ಮೈಸೂರಿನ‌ ಕೆ.ಆರ್ ನಗರದ ಸಂತ್ರಸ್ತ ಮಹಿಳೆ ತನ್ನ ಮೇಲೆ ಅತ್ಯಾವಾರ ಎಸಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಳು. ಕಳೆದ ವರ್ಷ ಎಸ್ಐಟಿ ಅಧಿಕಾರಿಗಳು‌ 123 ಸಾಕ್ಷಿಗಳನ್ನು ಸಂಗ್ರಹಿಸಿ 2 ಸಾವಿರ ಪುಟಗಳ ಆರೋಪ‌ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದರು.

Advertisement

Leave a reply

Your email address will not be published. Required fields are marked *

error: Content is protected !!