Select Page

Advertisement

ಪಿಕೆಪಿಎಸ್ ಹೆಸರಲ್ಲಿ ಭ್ರಷ್ಟಾಚಾರ ಎಸಗಿದ್ರಾ ರಮೇಶ್ ಜಾರಕಿಹೊಳಿ? ; ಕಡಾಡಿ ಗಂಭೀರ ಆರೋಪ

ಪಿಕೆಪಿಎಸ್ ಹೆಸರಲ್ಲಿ ಭ್ರಷ್ಟಾಚಾರ ಎಸಗಿದ್ರಾ ರಮೇಶ್ ಜಾರಕಿಹೊಳಿ? ; ಕಡಾಡಿ ಗಂಭೀರ ಆರೋಪ

ಬೆಳಗಾವಿ : ಒಂಬತ್ತು ಪಿಕೆಪಿಎಸ್ (ಪ್ರಾಥಮಿಕ ‌ಕೃಷಿ ಪತ್ತಿನ‌ ಸಹಕಾರ ಸಂಘ ) ಸೃಷ್ಟಿಸಿ ತಮ್ಮ ಬೇನಾಮಿ ಹಣವನ್ನು ಹೂಡಿಕೆ‌ ಮಾಡಿ ಇದೇ ಹಣವನ್ನು ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಶಾಸರ ರಮೇಶ್ ಜಾರಕಿಹೊಳಿ Ramesh jarakiholi ವಿರುದ್ಧ ಕಾಂಗ್ರೆಸ್ ನಾಯಕ ಮಹಾಂತೇಶ್ ಕಡಾಡಿ ಗಂಭೀರ ಆರೋಪ‌ ಮಾಡಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಬೇನಾಮಿ ಹಣವನ್ನು ನಕಲಿ ಪಿಕೆಪಿಎಸ್ ಹೆಸರಿನಲ್ಲಿ ಸೌಭಾಗ್ಯಲಕ್ಷ್ಮೀ ಕಾರ್ಖಾನೆ ನಿರ್ಮಾಣಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ಇಡಿ ತನಿಖೆ ನಡೆಯುತ್ತಿದ್ದರು ಈವರೆಗೆ ಯಾವುದೇ ಕ್ರಮ ಆಗಿಲ್ಲ ಎಂದರು.

ಗೋಕಾಕ್ ತಾಲೂಕಿನಲ್ಲಿ ಒಂಬತ್ತು ನಕಲಿ ಪಿಕೆಪಿಎಸ್ ಸೃಷ್ಟಿಸಲಾಗಿದೆ. ಬರುವ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸಲು ಇದೇ ಪಿಕೆಪಿಎಸ್ ಬಳಕೆ ಮಾಡಿಕೊಳ್ಳಲಾಗುತ್ತದೆ. ಸೊಸೈಟಿಗಳ ಕುರಿತು ಜನರಿಗೂ ಮಾಹಿತಿ ಇಲ್ಲ. ಈ ಕುರಿತು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಪತ್ರ ಬರೆದರೂ ಈವರೆಗೆ ಉತ್ತರ ಬಂದಿಲ್ಲ ಎಂದು ಆರೋಪಿಸಿದರು.

Advertisement

Leave a reply

Your email address will not be published. Required fields are marked *

error: Content is protected !!