ಗಂಡನನ್ನು ನದಿಗೆ ತಳ್ಳಿದ್ದ ಪತ್ನಿ ಪ್ರಕರಣಕ್ಕೆ ಟ್ವಿಸ್ಟ್ ; ತಾತಪ್ಪನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು..!
ರಾಯಚೂರು : ಪೋಟೋ ತಗೆಸಿಕೊಳ್ಳುವ ನೆಪದಲ್ಲಿ ಪತಿಯನ್ನು ಕೃಷ್ಣಾ ನದಿಗೆ ಪತ್ನಿ ತಳ್ಳಿದ್ದಾಳೆ ಎಂಬ ಪ್ರಕರಣ ಸಧ್ಯ ಬೇರೆ ರೂಪ ತಳ್ಳಿದ್ದು ಮಹಿಳೆ ವಿರುದ್ಧ ಆರೋಪ ಮಾಡಿದ್ದ ಐನಾತಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ರಾಯಚೂರು ಜಿಲ್ಲೆಯ ಗುರ್ಜಾಪುರ ಗ್ರಾಮದ ಬಳಿಯಲ್ಲಿ ಕೃಷ್ಣಾ ನದಿಗೆ ನಿರ್ಮಿಸಲಾಗಿದ್ದ ಸೇತುವೆಯಿಂದ ಹೆಂಡತಿ ತನ್ನನ್ನು ನದಿಗೆ ತಳ್ಳಿದ್ದಾನೆ ಎಂಬ ಘಟನೆಯ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ 2025ರಲ್ಲಿ ಹೆಂಡತಿ ಕೊಲೆ ಪ್ರಯತ್ನದ ಬಳಿಕವೂ ಬದುಕುಳಿದ ಏಕೈಕ ಗಂಡ ಎಂಬೆಲ್ಲಾ ಟ್ಯಾಗ್‌ಲೈನ್‌ಗಳು ವೈರಲ್ ಆಗಿದ್ದವು.
ರಾಯಚೂರಿನ ಗುರ್ಜಾಪುರದ ಕೃಷ್ಣಾ ನದಿ ಬ್ರಿಡ್ಜ್ ಮೇಲೆ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಇಂತಹ ಹೆಂಡತಿ ಇದ್ದರೆ ಗಂಡನಿಗೆ ಉಳಿಗಾಲ ಇಲ್ಲವೆಂಬ ಮಾತುಗಳು ಕೇಳಿಬಂದಿದ್ದವು. ಕಳೆದ ಮೂರು ತಿಂಗಳ ಹಿಂದಷ್ಟೇ ತಾತಪ್ಪ (ಗಂಡನ ಹೆಸರು) ಗದ್ದೆಮ್ಮ (ಹೆಂಡತಿ ಹೆಸರು) ಇಬ್ಬರೂ ಮದುವೆ ಮಾಡಿಕೊಂಡಿದ್ದರು. ಅತ್ತೆಯ ಮಗಳಾಗಿದ್ದ ಗದ್ದೆಮ್ಮ 8ನೇ ತರಗತಿ ಓದಿಕೊಂಡು ಹೊಲ, ಮನೆ ಕೆಲಸ ಮಾಡಿಕೊಂಡು ಮನೆಯ್ಲಿದ್ದಳು. ಮನೆಯವರು ಇಬ್ಬರನ್ನೂ ಮದುವೆ ಮಾಡಿಸಿ, ಸುಖ ಸಂಸಾರ ಮಾಡಿಕೊಂಡಿರಲು ಆಶೀರ್ವಾದ ಮಾಡಿದ್ದರು.
ನವಜೋಡಿ ಆಗಿದ್ದರಿಂದ ಊರೂರು ಸುತ್ತಾಡುವುದು, ಬೀಗರ ಮನೆಗೆ ಹೋಗಿ ಬರುವುದು ಸಾಮಾನ್ಯ. ಅಂತೆಯೇ ಗದ್ದೆಮ್ಮಳ ಚಿಕ್ಕಮ್ಮನ ಮನೆಗೆ ಗಂಡ-ಹೆಂಡತಿ ಇಬ್ಬರೂ ಹೋಗಿ ವಾಪಸ್ ಗಂಡನ ಮನೆಗೆ ಬಕ್‌ನಲ್ಲಿ ಹೋಗುತ್ತಿರುವಾಗ ಬ್ರಿಡ್ಜ್ ಬಳಿ ಫೋಟೋ ತೆಗೆದುಕೊಳ್ಳಲು ಬೈಕ್ ನಿಲ್ಲಿಸಿದ್ದಾರೆ. ಆಗ ಸೆಲ್ಫಿ ಫೋಟೋಗೆ ಗದ್ದೆಮ್ಮ ನಿರಾಕರಿಸಿದ್ದಾಳೆ. ಗಂಡನನ್ನು ಒಬ್ಬನೇ ನಿಲ್ಲಲು ಹೇಳಿ, ಫೋಟೋ ತೆಗೆಯುವಾಗ ತಳ್ಳಿದ್ದಾಳೆ ಎಂದು ಆಕೆಯ ಗಂಡ ಹೇಳಿದ್ದಾನೆ.
ಅಷ್ಟಕ್ಕೂ ಹೆಂಡತಿ ಗದ್ದೆಮ್ಮ ನನಗೆ ಬೇಡ, ಆಕೆ ನನ್ನ ಸಾಯಿಸೋ ಪ್ರಯತ್ನ ಮಾಡಿದ್ದಾಳೆ. ಆಕೆಯಿಂದ ಡಿವೋರ್ಸ್ ಬೇಕು ಎಂದು ಅರ್ಜಿ ಸಲ್ಲಿಕೆ ಮಾಡಿದ ತಾತಪ್ಪನ ಅಸಲಿ ಮುಖ ಇಲ್ಲಿ ಬಹಿರಂಗವಾಗಿದೆ. ಅಸಲಿಗೆ ಯುವತಿ ಗದ್ದೆಮ್ಮಳಿಗೆ ಇನ್ನೂ ಮದುವೆಯ ವಯಸ್ಸೇ ಆಗಿಲ್ಲ. ಅಪ್ರಾಪ್ತಳಾಗಿದ್ದ ಅತ್ತೆಯ ಮಗಳನ್ನು ಮದುವೆ ಮಾಡಿಕೊಂಡು ಆಕೆಯೊಂದಿಗೆ ಮೂರು ತಿಂಗಳು ಸಂಸಾರವನ್ನೂ ಮಾಡಿದ್ದಾನೆ.
ಗದ್ದೆಮ್ಮಳಿಗೆ ಇನ್ನೂ ಕಾನೂನಿನ ಅನ್ವಯ ಮದುವೆಯ ವಯಸ್ಸು 18 ವರ್ಷ ತುಂಬಿಲ್ಲ. ಆಕೆಗಿನ್ನೂ 15 ವರ್ಷ 8 ತಿಂಗಳು ಆಗಿದೆ. ಯಾದಗಿರಿಯಲ್ಲಿ ಓದುವಾಗಲೇ ಮದುವೆ ಮಾಡಿಕೊಂಡು, ಇದೀಗ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾಳೆ ಎಂಬ ಆರೋಪ ಮಾಡಿದ್ದಾನೆ ಎಂದು ತಾತಪ್ಪನ ವಿರುದ್ಧವೇ ಪೋಕ್ಸೋ ಕೇಸ್ ದಾಖಲು ಮಾಡಿಕೊಳ್ಳುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯ ಮಕ್ಕಳ ಹಕ್ಕು ಆಯೋಗದ ಸದಸ್ಯ ಶಶಿಧರ್ ಕೂಸುಂಬೆ ಅವರು ಹೆಂಡತಿಯೇ ಗಂಡನನ್ನು ನದಿಗೆ ತಳ್ಳಿದ್ದಾಳೆ ಎಂಬ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲಿಯೇ ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಭಾಗಿತ್ವದೊಂದಿಗೆ ಯುವತಿಯ ಮಾಹಿತಿ ಕಲೆ ಹಾಕಿದ್ದಾರೆ. ಆಗ ನವ ವಿವಾಹಿತೆ ಗದ್ದೆಮ್ಮಳಿಗೆ ಇನ್ನೂ 16 ವರ್ಷವೂ ತುಂಬಿಲ್ಲ. ಅಪ್ರಾಪ್ತೆಯನ್ನು ಮದುವೆ ಮಾಡಿಕೊಂಡು ತಾತಪ್ಪ, ಆರೋಪ ಮಾಡಿದ್ದಾನೆ.
ಈ ಹಿನ್ನೆಲೆಯಲ್ಲಿ ಬಾಲ್ಯವಿವಾಹ ಮತ್ತು ಪೋಕ್ಸೋ ಕೇಸ್‌ನಡಿ ತಾತಪ್ಪ ಹಾಗೂ ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸೂಚನೆ ಮಾಡಿದ್ದಾರೆ. ಇನ್ನು ಸಂತ್ರಸ್ತೆ ಗದ್ದೆಮ್ಮಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ, ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹ ಮಾಡಿದ್ದಾರೆ.


