Select Page

Advertisement

ಕೃಷಿ ಹೊಂಡದಲ್ಲಿ ಮುಳುಗಿ ತಂದೆ, ಮಗ ಸಾವು

ಕೃಷಿ ಹೊಂಡದಲ್ಲಿ ಮುಳುಗಿ ತಂದೆ, ಮಗ ಸಾವು

ಬೆಳಗಾವಿ : ಕೃಷಿ ಹೊಂಡದಲ್ಲಿ ಮುಳುಗಿ ತಂದೆ ಮಗ ಮೃತಪಟ್ಟ ಘಟನೆ ಭಾನುವಾರ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದಲ್ಲಿ ನಡೆದಿದೆ.

ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ನಿವಾಸಿಗಳಾದ ಬಸವರಾಜ್ ಕೆಂಗೇರಿ (40), ಧರೆಪ್ಪ ಕೆಂಗೇರಿ (14) ಮೃತ ದುರ್ದೈವಿಗಳು. ಬಸವರಾಜ ಹೆಂಡತಿ ತವರುಮನೆ ಮಳಗಲಿ ಗ್ರಾಮದ ಜಮೀನಿನಲ್ಲಿ ಬೆಳೆಗೆ ಕೀಟನಾಶಕ ಹೊಡೆಯಲು ಕೃಷಿ ಹೊಂಡದಲ್ಲಿನ ನೀರು ಎತ್ತುವ ವೇಳೆ ದುರ್ಘಟನೆ ಸಂಭವಿಸಿದೆ.

ಬಸವರಾಜ ಮೊದಲು ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ತಂದೆಯ ರಕ್ಷಣೆಗೆ ಬಂದ ಇಬ್ಬರು ಮಕ್ಕಳಾದ ಧರೆಪ್ಪ ಹಾಗೂ ಬಾಗಪ್ಪ ನೀರಿಗೆ ಇಳಿದಿದ್ದಾರೆ. ಈ ವೇಳೆ ಧರೆಪ್ಪ ಕೂಡ ಮೃತಪಟ್ಟಿದ್ದು ಪಕ್ಕದ ಜಮೀನಿನಲ್ಲಿದ್ದವರು ಬಾಗಪ್ಪನ್ನು ರಕ್ಷಣೆ ಮಾಡಿದ್ದಾರೆ.

ಗಂಭೀರ ಸ್ಥಿತಿಯಲ್ಲಿರುವ ಬಾಲಕ ಬಾಗಪ್ಪಗೆ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ಸ್ಥಳಕ್ಕೆ ಮುರಗೋಡ ಪೊಲೀಸರ ಭೇಟಿ ಪರಿಶೀಲನೆ.ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Advertisement

Leave a reply

Your email address will not be published. Required fields are marked *

error: Content is protected !!