Select Page

Advertisement

ಬೆಳಗಾವಿಯಲ್ಲಿ ದುರ್ಘಟನೆ ; ವಿಷ ಸೇವಿಸಿ ಒಂದೇ ಕುಟುಂಬದ ಮೂವರು ಸಾವು,

ಬೆಳಗಾವಿಯಲ್ಲಿ ದುರ್ಘಟನೆ ; ವಿಷ ಸೇವಿಸಿ ಒಂದೇ ಕುಟುಂಬದ ಮೂವರು ಸಾವು,



ಬೆಳಗಾವಿ : ಬೆಳಗಾವಿ ನಗರದಲ್ಲಿ‌ ಮನಕಲುಕುವ ಘಟನೆ ನಡೆದಿದ್ದು, ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿ ಮೂವರ ಮೃತಪಟ್ಟಿದ್ದರೆ, ಓರ್ವಳ ಸ್ಥಿತಿ ಗಂಭೀರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸಂತೋಷ ಕುರಡೇಕರ್ ( 44) , ಸುವರ್ಣ ಕುರಡೇಕರ್ , ಮಂಗಳಾ ಕುರಡೇಕರ್ ಆತ್ಮಹತ್ಯೆ ‌ಮಾಡಿಕೊಂಡವರು. ಸುನಂದ ಕುರಡೇಕರ್ ಸ್ಥಿತಿ ‌ಚಿಂತಾಜನಂಕವಾಗಿದೆ.ಬೆಳಗಾವಿ ನಗರದ ಜೋಷಿಮಾಳದಲ್ಲಿ ನಡೆದ ಘಟನೆ ನಡೆದಿದೆ.

ತಾಯಿ, ಮಗ, ಮಗಳು ಸಾವು, ಓರ್ವ ಮಗಳ ಸ್ಥಿತಿ ಗಂಭೀರವಾಗಿದೆ. ಇಂದು ಬೆಳಗ್ಗೆ 9 ಗಂಟೆಗೆ ವಿಷ ಸೇವಿಸಿರುವ ಕುಟುಂಬಸ್ಥರು. ಗಂಭೀರವಾಗಿರುವ ಮಗಳನ್ನು ಸ್ಥಳೀಯ ‌ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಸ್ಥಳಕ್ಕೆ ಶಹಾಪುರ ಪೊಲೀಸರ್ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Leave a reply

Your email address will not be published. Required fields are marked *

error: Content is protected !!