Select Page

Advertisement

ಅಥಣಿ ಜಿಲ್ಲೆ ಮಾಡದಿದ್ದರೆ ವಿಜಯಪುರಕ್ಕೆ ಸೇರುತ್ತೇವೆ ; ಮಹೇಶ್ ಕುಮಠಳ್ಳಿ

ಅಥಣಿ ಜಿಲ್ಲೆ ಮಾಡದಿದ್ದರೆ ವಿಜಯಪುರಕ್ಕೆ ಸೇರುತ್ತೇವೆ ; ಮಹೇಶ್ ಕುಮಠಳ್ಳಿ

ಬೆಳಗಾವಿ : ಅಥಣಿ ಜಿಲ್ಲಾ ಕೇಂದ್ರವಾಗಲು ಅರ್ಹವಾಗಿದೆ. ಮಹಾರಾಷ್ಟ್ರದ ಜೊತೆ ಹೆಚ್ಚಿನ ವ್ಯಾಪಾರ ವಹಿವಾಟು ಹೊಂದಿರುವ ತಾಲೂಕು ಅಭಿವೃದ್ಧಿ ಹೊಂದಿದೆ. ಒಂದು ವೇಳೆ ಅಥಣಿ ಜಿಲ್ಲೆಯಾಗದಿದ್ದರೆ ನಾವು ವಿಜಯಪುರಕ್ಕೆ ಸೇರುತ್ತೇವೆ ಎಂಬುದು ಜನರ ಅಭಿಪ್ರಾಯವಾಗಿದೆ ಎಂದು ಮಾಜಿ ಶಾಸಕ ಮಹೇಶ್ ಕುಮಠಳ್ಳಿ ಅಭಿಪ್ರಾಯಪಟ್ಟರು.

ಸೋಮವಾರ ಬೆಳಗಾವಿ ನಗರದಲ್ಲಿ ‌ಸಿದ್ದಿಗಾರರೊಂದಿಗೆ ಮಾತನಾಡಿದ ಇವರು. ಬೆಳಗಾವಿ ಜಿಲ್ಲಾ ವಿಭಜನೆಯಾದರೆ ಅಥಣಿ ಜಿಲ್ಲಾ ಕೇಂದ್ರವಾಗಬೇಕು ಎಂಬುದು ಬಹುದಿನಗಳ ಜನರ ಬಯಕೆಯಾಗಿದೆ. ಅಥಣಿಯಿಂದ ಬೆಳಗಾವಿ 150 ಕಿ.ಮೀಟರ್ ದೂರದಲ್ಲಿದ್ದು ಅಥಣಿ ಪ್ರತ್ಯೇಕ ಜಿಲ್ಲೆಯಾಗಲು ಅರ್ಹವಾಗಿದೆ ಎಂದರು.

ಆಡಳಿತಾತ್ಮಕ ವಿಚಾರವಾಗಿ ಮಾತ್ರ ಅಥಣಿ ಬೆಳಗಾವಿ ಜೊತೆ ಸಂಪರ್ಕ ಹೊಂದಿದೆ. ಆದರೆ ಮಹಾರಾಷ್ಟ್ರ, ವಿಜಯಪುರದ ಜೊತೆ ವ್ಯಾಪಾರ ಹೊಂದಿದೆ. ಅಭಿವೃದ್ಧಿ ಹೊಂದಿರುವ ತಾಲೂಕಿನಲ್ಲಿ ‌ಅಥಣಿ ಒಂದಾಗಿದ್ದು, ಒಂದುವೇಳೆ ಅಥಣಿ ಜಿಲ್ಲೆಯಾಗದಿದ್ದರೆ ನಾವು ವಿಜಯಪುರಕ್ಕೆ ಸೇರುತ್ತೇವೆ ಎಂದರು.


Advertisement

Leave a reply

Your email address will not be published. Required fields are marked *

error: Content is protected !!