ಡಾಬಾದೊಳಗೆ ನುಗ್ಗಿ ಮೂವರ ಬರ್ಬರ ಹತ್ಯೆ
ಕಲಬುರಗಿ : ಡಾಬಾದೊಳಗೆ ನುಗ್ಗಿ ಕೆಲಸ ಮಾಡುತ್ತಿದ್ದ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ
ಕಲಬುರಗಿ ನಗೃ ಹೊರವಲಯದಲ್ಲಿ ನಡೆದಿದೆ.
ಧಾಬಾ ಮಾಲೀಕ ಸಿದ್ಧಾರೂಢ (32), ಅಳಿಯ ಜಗದೀಶ್ (25) ಹಾಗೂ ಕೆಲಸಗಾರ ರಾಮಚಂದ್ರ (35) ಕೊಲೆಯಾದ ದುರ್ದೈವಿಗಳು.
ರೌಡಿಶೀಟರ್ ಸೋಮು ಕೊಲೆಯ ಸೇಡಿಗಾಗಿ ದುಷ್ಕರ್ಮಿಗಳು ತ್ರಿಬಲ್ ಮರ್ಡರ್ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಈ ಹಿಂದೇ ಸೋಮು ಕೊಲೆ ಪ್ರಕರಣದಲ್ಲಿ ಹತ್ಯೆಯಾದ ಮೂವರು ಜೈಲೆಗೆ ಹೋಗಿ ಬಂದಿದ್ದರು.
ಹಳೆಯ ದ್ವೇಷದ ಹಿನ್ನಲೆ ಸಮಯ ಸಾಧಿಸಿ ಮಂಗಳವಾರ ತಡರಾತ್ರಿ 1.30ರ ಸುಮಾರಿಗೆ ಕಲಬುರಗಿ ಹೊರವಲಯದ ಡ್ರೈವರ್ ಧಾಬಾಗೆ ನುಗ್ಗಿದ ರಾಚಯ್ಯ, ಈರಣ್ಣಾ, ನಾಗರಾಜ್ ಎನ್ನುವವರು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


