ಮೂಡಲಗಿ : ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಾವಣಪ್ಪಿರುವ ಘಟನೆ ತಾಲೂಕಿನ ಗುರ್ಲಾಪುರ ಹತ್ತಿರ ನಡೆದಿದೆ.

ಶ್ರೀಶೈಲ್ ಹಾದಿಮನಿ ( 36 ), ಸಂಜು ಮಾರಾಪುರ (38) ಮೃತ ದುರ್ದೈವಿಗಳು.‌ ನಿಪ್ಪಾಣಿ – ಲೋಕಾಪುರ ರಾಜ್ಯ ಹೆದ್ದಾರಿ ಬಳಿ ಬೈಕ್ ಮೇಲೆ ತೆರಳುವ ವೇಳೆ ಸಿಮೆಂಟ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ.

ಸ್ಥಳಕ್ಕೆ ಮೂಡಲಗಿ ಠಾಣೆ ಪೊಲೀಸರು ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದಾರೆ.