ಗುಜರಾತ್ : ಅಹಮದಾಬಾದ್ ವಿಮಾನ ದುರಂತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸಿಲುಕಿದ್ದಾರೆ ಎಂಬ ಮಾಹಿತಿ ಬೆನ್ನಲ್ಲೇ ಸಧ್ಯ ಇವರನ್ನೂ ಸೇರಿದಂತೆ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದು ದೃಢವಾಗಿದೆ.

ದುರಂತಗೊಂಡ ವಿಮಾನದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ 12ನೇ ಸೀಟ್‌ನಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದರು. ಸಧ್ಯ ಇವರೂ ಸೇರಿದಂತೆ ಅಹಮದಾಬಾದ್ ನಿಂದ ಲಂಡನ್ ಗೆ ತೆರಳಿದ್ದ 242 ಜನ ಮೃತಪಟ್ಟಿದ್ದಾರೆ.

ದುರಂತವಾದ ವಿಮಾನ ಅಹಮದಾಬಾದ್ ನ ವೈದ್ಯಕೀಯ ವಿದ್ಯಾರ್ಥಿಗಳು ವಾಸವಿದ್ದ ಹಾಸ್ಟೆಲ್ ಗೆ ಡಿಕ್ಕಿಯಾಗಿದ್ದು ಇಲ್ಲಿ ಅನೇಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲದೆ ಕೆಲ ವಿದ್ಯಾರ್ಥಿಗಳು ಮೃತಪಟ್ಟಿರು ಶಂಕೆ ವ್ಯಕ್ತವಾಗುತ್ತಿದೆ.