Select Page

Advertisement

ಶಿವಯೋಗಿಗಳ ಆಶಿರ್ವಾದದಿಂದ ಸುರಕ್ಷಿತವಾಗಿರುವೆ ; ಅಪಘಾತ ನಂತರ ಲಕ್ಷ್ಮಣ ಸವದಿ ಹೇಳಿದ್ದೇನು..?

ಶಿವಯೋಗಿಗಳ ಆಶಿರ್ವಾದದಿಂದ ಸುರಕ್ಷಿತವಾಗಿರುವೆ ; ಅಪಘಾತ ನಂತರ ಲಕ್ಷ್ಮಣ ಸವದಿ ಹೇಳಿದ್ದೇನು..?

ಅಥಣಿ : ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತೆರಳುತ್ತಿದ್ದ ಕಾರಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಘಟನೆ ಕುರಿತು ಶಾಸಕ ಲಕ್ಷ್ಮಣ ಸವದಿ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಇವರು. ಇಂದು ಸಂಜೆ ಬೆಳಗಾವಿ ಮೂಲಕ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ದರೂರ ಗ್ರಾಮದ ಹತ್ತಿರ ನನ್ನ ವಾಹನ ಚಿಕ್ಕ ಅಪಘಾತವಾಗಿದ್ದು ಅದೃಷ್ಟವಶಾತ್ ಯಾವುದೇ ರೀತಿಯ ಯಾರಿಗೂ ಪ್ರಾಣ ಅಪಾಯ ಸಂಭವಿಸಿಲ್ಲ.

ಭಗವಂತ ಹಾಗೂ ಶ್ರೀ ಶಿವಯೋಗಿಗಳ ಕೃಪಾಶೀರ್ವಾದ ಹಾಗೂ ಎಲ್ಲ ಹರ ಗುರು ಚರಮೂರ್ತಿಗಳ ಹಾಗೂ ಕ್ಷೇತ್ರದ ಜನರ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಸುರಕ್ಷಿತವಾಗಿದ್ದೆನೆ.

ಯಾರು ಆತಂಕ ಪಡುವ ಅಗತ್ಯವಿಲ್ಲ ಇವಾಗ ಸದ್ಯ ನಾನು ಕೆಲಸದ ನಿಮಿತ್ಯ ಬೆಂಗಳೂರಿಗೆ ತೆರಳಿದ್ದು ಬೆಂಗಳೂರಿನಿಂದ ಬಂದ ನಂತರ ಗೃಹ ಕಛೇರಿಯಲ್ಲಿ ತಮ್ಮಲ್ಲರನ್ನು ಭೇಟಿಯಾಗುತ್ತೇನೆ. ನಿಮ್ಮೆಲ್ಲರ ಪ್ರೀತಿಯ ಕಾಳಜಿಗೆ ನಾನು ಚಿರಋಣಿಯಾಗಿದ್ದೇನೆ. ಇಂತಿ ನಿಮ್ಮ ಪ್ರೀತಿಯ ಲಕ್ಷ್ಮಣ ಸವದಿ.

ಸೋಮವಾರ ಸಂಜೆ ಗೋಕಾಕ್ ಮಾರ್ಗವಾಗಿ ಬೆಳಗಾವಿಗೆ ತೆರಳುವ ವೇಳೆ ದರೂರ ಸಮೀಪ ಅಪಘಾತ ಸಂಭವಿಸಿದೆ. ಗೂಡ್ಸ್ ವಾಹನ ಸವದಿ ಅವರ ಕಾರಿಗೆ ಗುದ್ದಿದ್ದು, ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂಬುದು ಸಮಾಧಾನಕರ ಸಂಗತಿ.

Advertisement

Leave a reply

Your email address will not be published. Required fields are marked *

error: Content is protected !!