ದ. ಕನ್ನಡ ಜಿಲ್ಲಾ ಉಸ್ತುವಾರಿಯಿಂದ ಹಿಂದೆ ಸರಿಯುತ್ತಾರಾ ದಿನೇಶ್ ಗುಂಡೂರಾವ್..? ಸಚಿವರು ಹೇಳಿದ್ದೇನು…?
ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಕೋಮು ಗಲಭೆಯ ವಿಚಾರವಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣ ಸಧ್ಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೂ ತಲೆನೋವು ತರಿಸಿದೆ.
ಹೌದು ಸರಣಿ ಕೊಲೆಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ದಿನೇಶ್ ಗುಂಡೂರಾವ್ ಹಿಂದೆ ಸರಿಯುತ್ತಾರೆ ಎಂಬ ವದಂತಿಗೆ ಸ್ವತಃ ಸಚಿವರೇ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವರು. ಉಸ್ತುವಾರಿ ಬದಲಾವಣೆ ಕೇಳಿಲ್ಲ. ಇವೆಲ್ಲ ಸುಮ್ಮನೆ ಎಲ್ಲಿಂದ ಬರುತ್ತವೆ ಎಂಬುದು ಗೊತ್ತಿಲ್ಲ. ಜವಾಬ್ದಾರಿ ಇದ್ದಾಗ ಎಲ್ಲವನ್ನೂ ಎದುರಿಸಬೇಕಾಗುತ್ತದೆ ಎಂದರು.
ಈಗಾಗಲೇ ಅಲ್ಲಿ ಸಭೆ ಮಾಡಿರುವೆ. ಸ್ಥಳೀಯರು ಸಹಕಾರ ನೀಡಿದ್ದಾರೆ. ಒಂದಿಬ್ಬರು ವಿರೋಧ ಮಾಡಿರಬಹುದು. ಕೆಲವರು ರಾಜಕಾರಣ ಮಾಡಬಹುದು. ನನ್ನ ಉಸ್ತುವಾರಿ ಭೇಟಿ ಕುರಿತು ಎಲ್ಲರ ಗಮನದಲ್ಲಿದೆ ಎಂದರು.


