Select Page

ನನ್ನ ಸಾವಿಗೆ ಹೆಂಡತಿಯೇ ಕಾರಣ ; ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆಗೆ ಶರಣು

ನನ್ನ ಸಾವಿಗೆ ಹೆಂಡತಿಯೇ ಕಾರಣ ; ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆಗೆ ಶರಣು

ಬೆಳಗಾವಿ : ಮದುವೆಯಾಗಿ ಸಂಸಾರ ನಡೆಸಬೇಕಿದ್ದ ಹೆಂಡತಿಯ ಕಾಟಕ್ಕೆ ಪತಿರಾಯನೋರ್ವ ನೇಣು‌ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಅನಗೋಳದ ಶಿವಶಕ್ತಿ ಕಾಲೋನಿಯಲ್ಲಿ ಶುಕ್ರವಾರ ನಡೆದಿದೆ.

ಸುನೀಲ್ ಮೂಲಿಮನಿ (33) ಆತ್ಮಹತ್ಯೆ ‌ಮಾಡಿಕೊಂಡ ಪತಿ. ಮೈ ವೈಫ್ ಇಸ್ ರೀಸನ್ ಫಾರ್ ಮೈ ಸೊಸೈಡ್ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸುನೀಲ ಮೂಲಿಮನಿ ಬೆಳಗಾವಿಯ ಅನಗೋಳದ ಶ್ರೀರಾಮ ಕಾಲನಿ‌ ನಿವಾಸಿಯಾಗಿದ್ದ ಆತ, ಪತ್ನಿ- ಪುತ್ರಿ ಜೊತೆಗೆ ಪ್ರತ್ಯೇಕವಾಗಿ ವಾಸವಿದ್ದು, ಕಂಪ್ಯೂಟರ್ ‌ರಿಪೇರಿ ಕೆಲಸ ಮಾಡುತ್ತಿದ್ದ‌.

ಶಿವಶಕ್ತಿ ನಗರದ ಬಾಡಿಗೆ ಅಂಗಡಿ ಪಡೆದು ಕಂಪ್ಯೂಟರ್ ರಿಪೇರಿ ಮಾಡುತ್ತಿದ್ದ ಸುನೀಲ ತನ್ನ ಅಂಗಡಿಯಲ್ಲೇ ವೈರ್‌ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗಾವಿಯ ಉದ್ಯಮ‌ಭಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!