Select Page

ಬೆಳಗಾವಿ ಮೂಲದ MBBS ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಬೆಳಗಾವಿ ಮೂಲದ MBBS ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಸಾಂಗ್ಲಿ : ಕುಡಿದ ಅಮಲಿನಲ್ಲಿ 22 ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಮೇಲೆ ಇಬ್ಬರು ಸಹಪಾಠಿಗಳು ಹಾಗೂ ಓರ್ವ ಸ್ನೇಹಿತ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ.

ಮೇ.‌ 18 ರಂದು ಮಧ್ಯರಾತ್ರಿ ಸಿನೆಮಾ ನೋಡಲು ಯುವತಿ ತನ್ನ ಸ್ಮೇಹಿತರ ಜೊತೆ ತೆರಳಿದ್ದಳು.‌ ನಂತರ ಯುವತಿಯನ್ನು ಖಾಸಗಿ ಪ್ಲ್ಯಾಟ್ ಗೆ ಕರೆದೊಯ್ದಿದ್ದಾರೆ. ಈ ಸಂದರ್ಭದಲ್ಲಿ ಯುವತಿಗೆ ಪಾನೀಯದಲ್ಲಿ ಮಾತ್ರೆ ಕೊಟ್ಟು ಪ್ರಜ್ಞೆ ತಪ್ಪಿದ ನಂತರ ಮೂವರಿಂದ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ.

ಪ್ರಜ್ಞೆ ಬಂದ ನಂತರ ಯುವತಿ ಬೆಳಗಾವಿಯ ತಮ್ಮ ಮನೆಯವರಿಗೆ ಘಟನೆ ಕುರಿತು ವಿವರಿಸಿದ ನಂತರದಲ್ಲಿ ಸಾಂಗ್ಲಿಯ ವಿಶ್ರಂಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪುಣೆ, ಸೋಲಾಪುರ ಮತ್ತು ಸಾಂಗಲಿ ಮೂಲದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಲಯ ಮೇ.‌ 27 ರ ವರೆಗೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ‌.‌

Advertisement

Leave a reply

Your email address will not be published. Required fields are marked *

error: Content is protected !!