Select Page

Advertisement

ನಿನ್ನೆ ವಾರ್ಷಿಕೋತ್ಸವ ಆಚರಿಸಿದ್ದ ಶಿಕ್ಷಕ ಇಂದು ದುರಂತ ಅಂತ್ಯ

ನಿನ್ನೆ ವಾರ್ಷಿಕೋತ್ಸವ ಆಚರಿಸಿದ್ದ ಶಿಕ್ಷಕ ಇಂದು ದುರಂತ ಅಂತ್ಯ


ಅಥಣಿ : ನಿನ್ನೆಯಷ್ಟೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಇಡೀ ಕುಟುಂಬ ತೇಲಾಡುತ್ತಿತ್ತು. ಮಿತ್ರರು ಬಂದು ಶುಭ ಹಾರೈಸಿ ಕೇಕ್ ತಿನಿಸಿದ್ದರು. ಉದೇ ಖುಷಿಯಲ್ಲಿ ಪತ್ನಿ ಮತ್ತು‌ ಮಕ್ಕಳ ಜೊತೆ ಪ್ರವಾಸ ಮುಗಿಸಿ ಮನೆಗೆ ವಾಪಸ್ಸಾದ ಶಿಕ್ಷಕ ಕ್ಷಣಮಾತ್ರದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.

ಪ್ರವೀಣಕುಮಾರ ಜಿ ಕಡಪಟ್ಟಿಮಠ (41) ಮೃತ ದುರ್ದೈವಿ. ವಿವಾಹ ವಾರ್ಷಿಕೋತ್ಸವ ಹಿನ್ನಲೆಯಲ್ಲಿ ಪ್ರವಾಸ ಮುಗಿಸಿ ವಾಪಸ್ ಮನೆಗೆ ತೆರಳಿದ ಸಂದರ್ಭದಲ್ಲಿ ಗೇಟ್ ತಗೆಯಲು ಹೋದಾಗ ವಿದ್ಯುತ್ ತಗುಲಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೂಲತಃ ತೇರದಾಳ ಗ್ರಾಮದವರಾದ ಇವರು, ಅಥಣಿ ತಾಲೂಕಿನ ಸತ್ತಿ ಗ್ರಾಮದ ಸರಕಾರಿ ಫೌಡ ಶಾಲೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರವೀಣಕುಮಾರ್ ಕುಟುಂಬ ನಿನ್ನೆಯಷ್ಟೇ ವಿವಾಹ ಮಹೋತ್ಸವ ಆಚರಿಸಿಕೊಂಡಿದ್ದರು.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಶಿಕ್ಷಕನ ಕುಟುಂಬದವರ ಆಕ್ರಂದನ ‌ಮುಗಿಲು ಮುಟ್ಟಿದೆ. ಗಂಡನನ್ನು ಕಳೆದುಕೊಂಡ ಪತ್ನಿ ಕಣ್ಣೀರಿನ ಮೂಲಕ ನೋವು ಹೊರಹಾಕುವ ದೃಶ್ಯ ಎಂತವರನ್ನೂ ಕರಗುವಂತೆ ಮಾಡುತ್ತಿದೆ.

Advertisement

Leave a reply

Your email address will not be published. Required fields are marked *

error: Content is protected !!