ಕದನವಿರಾಮ ಉಲ್ಲಂಘನೆ : ಗಡಿಯಲ್ಲಿ ಪಾಕಿಸ್ತಾನದಿಂದ ಗುಂಡಿನ ದಾಳಿ
ಜಮ್ಮು ಕಾಶ್ಮೀರ : ಅಮೇರಿಕಾ ಮಧ್ಯಸ್ಥಿಕೆ ನಂತರ ಬರುವ ಮೇ. 12 ರವರೆಗೆ ಕದನ ವಿರಾಮದ ನಂತರವೂ ಮತ್ತೆ ಪಾಕಿಸ್ತಾನ ಬಾಲ ಬಿಚ್ಚಿದ್ದು ಜಮ್ಮು ಕಾಶ್ಮೀರದ ಶ್ರೀನಗರದ ಮೇಲೆ ಡ್ರೋಣ್ ಮೂಲಕ ದಾಳಿನಡೆಸಿದೆ.
ಗಡಿ ನಿಯಂತ್ರಣ ರೇಖೆ ಸಮೀಪದಲ್ಲೇ ಪಾಕಿಸ್ತಾನ ವಾಯು ದಾಳಿ ಮಡೆಸಿದ್ದು, ಭಾರತೀಯ ಸೇನೆಯೂ ಪ್ರತ್ಯುತ್ತರ ನೀಡುತ್ತಿದೆ. ಜಮ್ಮು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಗುಜರಾತ್ ಹಾಗೂ ಹರಿಯಾಣ ರಾಜ್ಯದಲ್ಲಿ ದಾಳಿ ಮುಂದುವರಿದಿದೆ.
ಮಾತುಕತೆ ನಡೆದು ಕದನ ವಿರಾಮ ಘೋಷಣೆ ಬೆನ್ನಲ್ಲೇ ಕೇವಲ 3 ತಾಸುಗಳಲ್ಲಿ ಭಾರತದ ಮೇಲೆ ಪಾಕಿಸ್ತಾನ ದಾಳಿ ನಡೆಸಿದ್ದು, ಆ ದೇಶದ ಕುತಂತ್ರ ಬುದ್ದಿ ಎಂತಹದು ಎಂದು ತೋರಿಸಿಕೊಟ್ಟಿದೆ.


