ಮೂಡಲಗಿ : ಭೀಕರ ರಸ್ತೆ ಅಪಘಾತ, ಯುವಕ ಸಾವು
ಮೂಡಲಗಿ : ಪಟ್ಟಣದ ಎಲೆಕ್ಟ್ರಿಕಲ್ ಬೈಕ್ ಶೋರೂಮ್ ನಲ್ಲಿ ಕೆಲಸ ಮುಗಿಸಿ ಮನೆಗೆ ಬೈಕ್ ಮೇಲೆ ತೆರಳುತ್ತಿದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ತಡ ರಾತ್ರಿ ಮೂಡಲಗಿ- ಗುರ್ಲಾಪೂರ ರಸ್ತೆಯಲ್ಲಿ ನಡೆದಿದೆ.
ತಾಲೂಕಿನ ಹಳ್ಳೂರ ಗ್ರಾಮ ಬಸವನಗರ ತೋಟದ ಪ್ರಕಾಶ ಬೆಳಗಲಿ (22) ಮೃತಪಟ್ಟ ದುರ್ದೈವಿ. ಬೈಕ್ನಲ್ಲಿ ಮೂಡಲಗಿ ಪಟ್ಟಣದಿಂದ ಮನೆಗೆ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ತೆಲೆಗೆ ಬಲವಾದ ಪೆಟು ಬಿದ್ದು ರಕ್ತ ಸಾವರವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಪಟ್ಟಣದ ಮೂಡಲಗಿ ಪಿಎಸ್ಐ ರಾಜು ಪೂಜಾರಿ, ಕ್ರೈಂ ಪಿಎಸ್ಐ ಬಿ ಎಚ್ ಕುಂಬಾರ ಹಾಗೂ ಪೊಲೀಸ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಅಪಘಾದ ವಾಹನ ಪತ್ತೆಗೆ ಜಾಲ ಬಿಸಿದ್ದಾರೆ


