ಒಬ್ಬೊಬ್ಬ ಉಗ್ರನನ್ನು ಹುಡುಕಿ ಹೊಡೆಯುತ್ತೇವೆ ; ಆತ್ಮಕ್ಕೆ ಪೆಟ್ಟು ಬಿದ್ದಿದೆ ಎಂದ ಪ್ರಧಾನಿ ಮೋದಿ
ಬಿಹಾರ : ಭಾರತೀಯರ ಮೇಲೆ ಗುಂಡಿನ ದಾಳಿ ಮಾಡಿರುವ ಉಗ್ರಗಾಮಿಗಳ ವಿರುದ್ಧ ಪ್ರಧಾನಿ ಮೋದಿ ಸಿಡಿದಿದ್ದು, ಒಬ್ಬೊಬ್ಬ ಉಗ್ರನನ್ನೂ ಗುಡುಕಿ ಹೊಡೆಯುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿಹಾರದಲ್ಲಿ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಇವರು. ಜಮ್ಮು ಕಾಶ್ಮೀರದ ಮಹಲ್ಗಾಮ್ ನಲ್ಲಿ ನಡೆದ ಭಾರತೀಯರ ಮೇಲಿನ ಉಗ್ರರ ದಾಳಿ ಕೇವಲ ಜನರ ಮೇಲಿನ ದಾಳಿಯಲ್ಲ. ಭಾರತದ ಆತ್ಮದ ಮೇಲೆ ಆಗಿರುವ ದಾಳಿ ಎಂದಿದ್ದಾರೆ.
ಯಾರು ಈ ದಾಳಿ ಮಾಡಿದ್ದಾರೆ ಅವರೂ ಕಲ್ಪನೆ ಮಾಡಲು ಸಾಧ್ಯವಿಲ್ಲ, ಆ ರೀತಿಯ ಪ್ರತ್ಯುತ್ತರ ನೀಡುತ್ತೇವೆ. ಭಾರತೀಯರು ಒಗ್ಗಟ್ಟಿನಿಂದ ಇದ್ದರೆ ಉಗ್ರರ ನಡ ಮುರಿಯುವುದು ಕಷ್ಟದ ಕೆಲಸವಲ್ಲ. ಭೂಮಿಯಿಂದಲೇ ಅವರನ್ನು ಹೊರಗೆ ಅಟ್ಟುತ್ತೇವೆ ಎಂದು ಹೇಳಿದ್ದಾರೆ.
ಶತ್ರುಗಳು ಭಾರತದ ಆತ್ಮದ ಮೇಲೆ ದಾಳಿ ಮಾಡಿದ್ದಾರೆ. ಭಯೋತ್ಪಾದನೆ ತೊಲಗಿಸುವ ನಿಟ್ಟಿನಲ್ಲಿ ಭಾರತ ಯಾವತ್ತೂ ಹಿಂದೆ ಹೆಜ್ಜೆ ಇಡುವುದಿಲ್ಲ. ದಾಳಿಗೆ ಒಳಗಾದವರ ಕುಟುಂಬದ ಬೆಂಬಲಕ್ಕೆ ಇಡೀ ದೇಶವೇ ನಿಂತಿದೆ. ಮನಸ್ಸಿನಲ್ಲಿ ದುಃಖ ಇದೆ ಎಂದು ಮೋದಿ ಭಾವುಕರಾಗಿದ್ದಾರೆ.


