ದಾಖಲೆ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆ ; ಆಭರಣ ಪ್ರಿಯರಿಗೆ ಶಾಕ್
ಬೆಂಗಳೂರು : ಭಾರತದಲ್ಲಿ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದು ಬರೋಬ್ಬರಿ ಲಕ್ಷಕ್ಕೆ ತಲುಪಿದೆ. ಸಧ್ಯ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ. ಆದಂತಾಗಿದೆ.
(Gold rates) ಸಿಕ್ಕಾಪಟ್ಟೆ ಏರುತ್ತಿದೆ. ನಿನ್ನೆ ಗ್ರಾಮ್ಗೆ 70 ರೂ ಹೆಚ್ಚಿದ್ದ ಅದರ ಬೆಲೆ ಇವತ್ತು ಬರೋಬ್ಬರಿ 275 ರೂನಷ್ಟು ಏರಿಕೆ ಕಂಡಿದೆ. ಅಪರಂಜಿ ಚಿನ್ನವಂತೂ ಗ್ರಾಮ್ಗೆ 300 ರೂನಷ್ಟು ಹೆಚ್ಚಳವಾಗಿದೆ.
24 ಕ್ಯಾರಟ್ ಚಿನ್ನದ ಬೆಲೆ ಇದೇ ಮೊದಲ ಬಾರಿಗೆ 10,000 ರೂ ಗಡಿ ದಾಟಿದೆ. ಬೆಂಗಳೂರಿನಲ್ಲಿ ಈ ಶುದ್ಧ ಚಿನ್ನದ ಬೆಲೆ ಗ್ರಾಮ್ಗೆ 10,135 ರೂ ಬೆಲೆ ಪಡೆದಿದೆ. ಆಭರಣ ಚಿನ್ನದ ಬೆಲೆ ಭಾರತದಲ್ಲಿ ಮೊದಲ ಬಾರಿಗೆ 9,300 ರೂ ಗಡಿ ದಾಟಿದೆ. ವಿದೇಶಗಳಲ್ಲೂ ಚಿನ್ನದ ಬೆಲೆ ದಾಖಲೆ ಬರೆದಿದೆ.
ಅಮೆರಿಕ ಸೇರಿದಂತೆ ಎಲ್ಲಾ ದೇಶಗಳಲ್ಲೂ ಸಾರ್ವಕಾಲಿಕ ಗರಿಷ್ಠ ಬೆಲೆ ದಾಖಲಿಸಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 92,900 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,01,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,100 ರುಪಾಯಿ ಇದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 92,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,100 ರುಪಾಯಿಯಲ್ಲಿ ಇದೆ.


