CRIME : ಯುವಕ ಕಿರುಕುಳ – ಹಸೆಮಣೆ ಏರಬೇಕಿದ್ದ ಯುವತಿ ಸ್ಮಶಾನಕ್ಕೆ
ಗದಗ : ಮದುವೆಯ ಸಂಭ್ರಮದಲ್ಲಿದ್ದ ಯುವತಿಯೊಬ್ಬಳಿಗೆ ಯುವಕನೋರ್ವ ಸದಾ ಕಿರುಕುಳ ನೀಡುತ್ತಿದ್ದ ಹಿನ್ನಲೆ ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ ನಡೆದಿದೆ.
ಮೃತ ಯುವತಿಯನ್ನು ಗದಗ ತಾಲೂಕಿನ ಅಸುಂಡಿಯಲ್ಲಿ ಸಾಯಿರಾಬಾನು ನದಾಫ್ (29) ಎಂದು ಗುರುತಿಸಲಾಗಿದೆ. ನದಾಫ್ ಎಂಬ ಯುವತಿಗೆ ಮೇ. 8 ರಂದು ಮದುವೆ ನಿಗದಿಯಾಗಿತ್ತು. ಈ ವಿಚಾರ ಗೊತ್ತಿದ್ದರೂ ಕೂಡ ಅದೇ ಗ್ರಾಮದ ಮೈಲಾರಿ ಎಂಬಾತ ಕಿರುಕುಳ ನೀಡುತ್ತಿದ್ದ..
ನನಗೆ ಮದುವೆ ಫಿಕ್ಸ್ ಆಗಿದೆ ಎಂದು ಹೇಳಿದರೂ ಕೂಡ ಕೇಳದೆ ಸದಾ ಹಿಂಸೆ ನೀಡುತ್ತಿದ್ದ, ಮೈಲಾರಿಯ ಈ ನಡೆಯಿಂದ ಬೇಸತ್ತ ನದಾಫ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.


