Select Page

Advertisement

ನನ್ನ LOVE ಉಳಿಯಬೇಕಾದ್ರ ಪಾಸ್ ಮಾಡಿ ; 500 ರೂ. ಇಟ್ಟು ಬೇಡಿಕೊಂಡ SSLC ವಿದ್ಯಾರ್ಥಿ

ನನ್ನ LOVE ಉಳಿಯಬೇಕಾದ್ರ ಪಾಸ್ ಮಾಡಿ ; 500 ರೂ. ಇಟ್ಟು ಬೇಡಿಕೊಂಡ SSLC ವಿದ್ಯಾರ್ಥಿ

ಚಿಕ್ಕೋಡಿ : ಎಸ್ಸೆಸ್ಸೆಲ್ಸಿ ಪರೀಕ್ಷಾ ಮೌಲ್ಯ ಮಾಪನದ ವೇಳೆ ಚಿತ್ರ ಗೀತೆಯ ಹಾಡು, ಕಥೆ,‌ಕವನ ಬರೆದಿರುವ ವಿಷಯಗಳು ಸಾಕಷ್ಟು ನೋಡಿದ್ದೇವೆ‌. ಆದರೆ ಇಲ್ಲೊಬ್ಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೋರ್ವ ಮೌಲ್ಯ ಮಾಪನ ಮಾಡುವ ಶಿಕ್ಷಕರಿಗೆ 500 ರೂ. ನೋಟು ಇಟ್ಟು ತನ್ನ ಪ್ರೇಮ ನಿವೇದನೆ ಪ್ರಶ್ನೆ ಪತ್ರಿಕೆಯ ಉತ್ತರದಲ್ಲಿ ಇಟ್ಟಿದ್ದು ವೈರಲ್ ಆಗಿದೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡುವಂತೆ ವಿಚಿತ್ರ ಬೇಡಿಕೆ ಇಟ್ಟು ಉತ್ತರ ಪತ್ರಿಕೆಯಲ್ಲಿ ಬರೆದ ಸಂಗತಿ ಬೆಳಕಿಗೆ ಬಂದಿದೆ. ಹೌದು ಇಲ್ಲೊಬ್ಬ ವಿದ್ಯಾರ್ಥಿ ವಿಚಿತ್ರವಾಗಿ ಬೇಡಿಕೆ ಇಟ್ಟಿದ್ದಾನೆ.

“ ನೀವು ಪಾಸ್ ಮಾಡಿದರೆ, ಅಷ್ಟೇ ನನಗೆ ಲವ್ ಮಾಡುತ್ತೇನೆ ಅಂದಾಳು. ಪ್ಲೀಸ್ ನನ್ನ ಲವ್ ನಿಮ್ಮ ಕೈಯಲ್ಲಿದೆ ಎಂದು 500 ರುಪಾಯಿ ಹಣ ಇಟ್ಟು ನೀವು ಚಹಾ ಕುಡಿಯಿರಿ ಎಂದು ಬೇಡಿಕೊಂಡ ವಿಚಿತ್ರ ಪತ್ರಿಕೆ ಬೆಳಕಿಗೆ ಬಂದಿದೆ‌”.

ಪರೀಕ್ಷೆಗಳಲ್ಲಿ ಪಾಸ್ ಆಗಲು ಡೌಟ್ ಇರುವಂತಹ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯಲ್ಲಿ ನಾನಾ ತರಹದ ಬರಹ ಬರೆದು ಪತ್ರಿಕೆ ಮೇಲ್ವಿಚಾರಕರನ್ನು ಮನವೋಲೈಸೋದನ್ನು ನೋಡಿದ್ದೀವಿ. ‘ಸರ್ ನನ್ನನ್ನು ದಯವಿಟ್ಟು ಪಾಸ್ ಮಾಡಿ. ನಿಮಗೆ ದೇವರು ಒಳ್ಳೆಯದು ಮಾಡಲಿ, ನಿಮ್ಮ ಹೆಸರು ಹೇಳಿ ಬದುಕುತ್ತೀನಿ’ ವಿನಮ್ರವಾಗಿ ಬೇಡಿಕೆ ಇಟ್ಟಿದ್ದೂ ಉದಾಹರಣೆ ಇದೆ.

ಆದರೆ ಹೀಗೆ ಲವ್ ಮಾಡುತ್ತೇನೆ ಎಂದು ಬರೆದು ಹಣ ಇಟ್ಟುಕಳಿಸಿದ್ದು ನೋಡಿ ಮೇಲ್ವಿಚಾರಕರಿಗೆ ಹಾಸ್ಯಾಸ್ಪದ ಆಗಿದೆ. ಕಲಿಯುವ ಆಸಕ್ತಿ ಇಲ್ಲದೇ ಕೆಲವು ವಿದ್ಯಾರ್ಥಿಗಳ ಬೇಡಿಕೆ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!