ಅಕ್ಕನ ಮಗಳ ಮದುವೆಗೆ ರಜೆ ನಿರಾಕರಣೆ ; ಬಸ್ ಚಾಲಕ ಆತ್ಮಹತ್ಯೆ
ಬೆಳಗಾವಿ : ಕೆಎಸ್ ಆರ್ ಟಿಸಿ ಚಾಲಕನಿಗೆ ರಜೆ ನೀಡಿದ ಹಿನ್ನೆಲೆಯಲ್ಲಿ ಬಸ್ಸಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಓಲ್ಡ್ ಗಾಂಧಿ ನಗರದ ಮಾರುತಿ ಗಲ್ಲಿಯ ಬಾಲಚಂದ್ರ ಶಿವಪ್ಪ ಹುಕ್ಕೋಜಿ (47 ) ಆತ್ಮಹತ್ಯೆ ಮಾಡಿಕೊಂಡ ಚಾಲಕ. ರಜೆ ನೀಡುವಂತೆ ಡಿಪೋ ಮ್ಯಾನೇಜರ್ ಗೆ ಅಕ್ಕನ ಮಗಳ ಮದುವೆಗೆ ರಜೆ ನೀಡುವಂತೆ ಅರ್ಜಿ ಸಲ್ಲಿಸಿದ ಸಾರಿಗೆ ಬಸ್ ಚಾಲಕನಿಗೆ ರಜೆ ನೀಡದ ಹಿನ್ನೆಲೆಯಲ್ಲಿ ಸಿಬಿಟಿ ಶಹಾಪುರ ನಾಕಾದಿಂದ ವಡಗಾಂವ ಬಸ್ ನಲ್ಲಿಯೇ ನೇಣಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಸಿಬ್ಬಂದಿಯ ಕಿರುಕುಳದಿಂದ ಸಾರಿಗೆ ಮೆಕ್ಯಾನಿಕಲ್ ಆತ್ಮಹತ್ಯೆ ಮಾಡಿಕೊಂಡಿದ್ದ. ಈಗ ಸಾರಿಗೆ ಸಿಬ್ಬಂದಿ ರಜೆ ನೀಡದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಮಾರ್ಕೆಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


