Select Page

Advertisement

ಪ್ರೀತಿಗಾಗಿ ಬಂದಾಕೆ ಹೆಣವಾದಳು ; ವಿಜಯಪುರ to ಬೆಳಗಾವಿ ಪ್ರೇಮ ಕಹಾನಿ

ಪ್ರೀತಿಗಾಗಿ ಬಂದಾಕೆ ಹೆಣವಾದಳು ; ವಿಜಯಪುರ to ಬೆಳಗಾವಿ ಪ್ರೇಮ ಕಹಾನಿ

ಬೆಳಗಾವಿ : ವಿಜಯಪುರ ಮೂಲದ ಎಂಬಿಎ ವಿದ್ಯಾರ್ಥಿನಿ ಐಶ್ವರ್ಯಲಕ್ಷ್ಮೀ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ
ಆಕಾಶ ಚಡಚಣ ( 27 ) ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಯವತಿ ಐಶ್ವರ್ಯಲಕ್ಷ್ಮೀ ಗಲಗಲಿ ಎಂಬಾಕೆ ಆಕಾಶನನ್ನು ಪ್ರೀತಿಸುತ್ತಿದ್ದಳು. ಆದರೆ ಕಳೆದ ಕೆಲ ದಿನಗಳಿಂದ ಆರೋಪಿ ಬೆರೆ ಯುವತಿ ಜೊತೆ ಸ್ನೇಹ ಬೆಳಸಿದ್ದ. ಇದೇ ಕಾರಣಕ್ಕೆ ಐಶ್ವರ್ಯ ನನ್ನ ಸಾವಿಗೆ ನೀವೆ ಕಾರಣ ಎಂದು ಮೆಸೆಜ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಬೆಳಗಾವಿಯಲ್ಲಿ ವಾಸವಿದ್ದ ಯುವತಿ ಐಶ್ವರ್ಯ ನೆಹರು ನಗರದ ಪಿಜಿ ಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು‌. ಇದಾದ ಕೆಲ ಸಮಯದ ನಂತರ ಆರೋಪಿ ಆಕಾಶ್ ಯುವತಿ ಇದ್ದ ಸ್ಥಳಕ್ಕೆ ಬಂದು ಮೋಬೈಲ್ ಕದ್ದು ಪರಾರಿ ಆಗಿದ್ದ.

ಆದರೆ ಆರೋಪಿ ಆಕಾಶ್ ಪಿ.ಜಿ ಗೆ ಬಂದು ಯುವತಿ ರೂಂ ಗೆ ಹೋಗಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಸಧ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಹಾಜರುಪಡಿಸಿದ್ದಾರೆ.

ಕಾಲೇಜು ದಿನಗಳಿಂದ ಐಶ್ವರ್ಯ ಹಾಗೂ ಆಕಾಶ್ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಯುವಕ ಆಕಾಶ್ ಬೆಳಗಾವಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತನಿಗಾಗಿ ಯುವತಿ ಬೆಳಗಾವಿಯಲ್ಲಿ ಕೆಲಸ ಮಾಡುವ ನೆಪದಲ್ಲಿ ಬಂದಿದ್ದಳು.

ಆದರೆ ಆಕಾಶ್ ಬೇರೆ ಯುವತಿ ಜೊತೆ ಪ್ರೇಮದಲ್ಲಿ ಬಿದ್ದಿದ್ದ. ಇದರಿಂದ ಮನನೊಂದ ಐಶ್ವರ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

Leave a reply

Your email address will not be published. Required fields are marked *

error: Content is protected !!