ಗದಗ : TV9 ಕ್ಯಾಮರಾಮನ್ ರವಿ ಗಿರಣಿ ನಿಧನ
ಗದಗ : ಕನ್ನಡದ ಖ್ಯಾತ ಸುದ್ದಿ ವಾಹಿನಿ TV9 ನಲ್ಲಿ ಗದಗ ಜಿಲ್ಲೆಯ ಕ್ಯಾಮರಾಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ ಗಿರಣಿ ಅಕಾಲಿಕ ನಿಧನ ಹೊಂದಿದ್ದಾರೆ.
ರವಿ ಗಿರಣಿ ಗದಗ ಜಿಲ್ಲೆಯ ಕ್ಯಾಮರಾಮನ್ ಆಗಿ ಟಿವಿ9 ಗೆ ಸೇರಿಕೊಂಡಿದ್ದರು. ತದನಂತರ ಹುಬ್ಬಳ್ಳಿ ಧಾರವಾಡದಲ್ಲಿಯೂ ಕರ್ತವ್ಯ ನಿರ್ವಹಿಸಿದ್ದರು
ನ್ಯೂಸ್‌ಗೆ ಬೇಕಾಗುವ ದೃಶ್ಯಾವಳಿಗಳನ್ನ ಸೆರೆ ಹಿಡಿಯುವಲ್ಲಿ ರವಿ ಗಿರಣಿ, ಪರಿಣಿತನಾಗಿದ್ದರು. ಹಾಗಾಗಿಯೇ ಒಂದೇ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತ ಬಂದಿದ್ದರು.
ಎರಡು ಮಕ್ಕಳನ್ನ ಹೊಂದಿರುವ ರವಿ ಗಿರಣಿ ಅಕಾಲಿಕವಾಗಿ ಸಾವಿಗೀಡಾಗಿದ್ದು, ಪತ್ರಕರ್ತರ ವಲಯದಲ್ಲಿ ನೋವನ್ನುಂಟು ಮಾಡಿದೆ.


