ರಾಮದುರ್ಗ ಅಪಘಾತದಲ್ಲಿ ಇಬ್ಬರ ಸಾವು ; ಕೊಲೆ ಆರೋಪ
ರಾಮದುರ್ಗ : ಅಪಘಾತದ ಮಾದರಿಯಲ್ಲಿ ಇಬ್ಬರನ್ನು ಕೊಲೆ ಮಾಡಿದ ಘಟನೆ ತಾಲೂಕಿನ ಮುಕದವಿ ಗುಡ್ಡದ ತಿರುವಿನಲ್ಲಿ ರವಿವಾರ ರಾತ್ರಿ ನಡೆದಿದ್ದು, ಹಲಗತ್ತಿ ಗ್ರಾಮದ ಮೃತರ ಸಂಬಂಧಿ ತಿಮ್ಮಣ್ಣ ಬಾಲಪ್ಪ ಮುದಕವಿ ರಾಮದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಕ್ಕರೆ ಚೀಲಗಳನ್ನು ತುಂಬಿದ ಲಾರಿ ಕುಳಗೇರಿ ಕ್ರಾಸ್ನಿಂದ ರಾಮದುರ್ಗ ಮಾರ್ಗವಾಗಿ ಸಂಚರಿಸುವ ಸಂದರ್ಭದಲ್ಲಿ ಅದರದಲ್ಲಿ ಪ್ರಯಾಣಿಸುತ್ತಿದ್ದ, ಹಲಗತ್ತಿ ಗ್ರಾಮದ ಬಾಲಪ್ಪ ತಿಮ್ಮಣ್ಣ ಮುದಕವಿ (28) ಅಪಘಾತ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಗಾಯಗೊಂಡಿದ್ದ ಯಲ್ಲವ್ವ ಉಮೇಶ ಹುಚ್ಚನ್ನವರ (38) ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಹಲಗತ್ತಿ ಗ್ರಾಮದ ಮಂಜುಳಾ ತಿಮ್ಮಣ್ಣ ಮುದಕವಿ (47), ರುಕ್ಮವ್ವ ಖಾನಪ್ಪ ಗಿಡ್ಡನ್ನವರ (68), ಗುತ್ತಿಗೋಳಿ ಹೊಸಕೋಟಿಯ ಉಮೇಶ ಯಂಕಪ್ಪ ಹುಚ್ಚನ್ನವರ (45) ತೀವ್ರ ಗಾಯಗೊಂಡಿದ್ದು, ರಾಮದುರ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೀಳಗಿಯ ಲಾರಿ ಚಾಲಕ, ಗಾಯಗೊಂಡಿದ್ದಾನೆ.
ಘಟನೆಯಲ್ಲಿ ಲಾರಿ ಚಾಲಕ ಧನುಷ್ ಸೋಮಪ್ಪ ಚವ್ಹಾಣ ನಿರ್ಲಕ್ಷö್ಯತನದಿಂದ ವೇಗವಾಗಿ ವಾಹನ ಚಾಲನೆ ಮಾಡಿ, ಹಲಗತ್ತಿ ಹದ್ದಿನ ಮಾರುತಿ ಬಾಲಪ್ಪ ಮುದಕವಿ ಅವರ ಜಮೀನಿನ ಎದುರು ಇರುವ ತಗ್ಗು ಪ್ರದೇಶದಲ್ಲಿ ಲಾರಿಯನ್ನು ಕೆಡವಿ, ಅಪಘಾತಪಡಿಸಿ, ಬಾಲಪ್ಪ ತಿಮ್ಮಣ್ಣ ಮುದಕವಿ ಅವರನ್ನು ಗಾಯಪಡಿಸಿ ಮೃತಪಡಿಸಿದ್ದಾನೆ.
ಯಲ್ಲವ್ವ ಉಮೇಶ ಹುಚ್ಚನ್ನವರ, ಮಂಜುಳಾ ತಿಮ್ಮಣ್ಣ ಮುದಕವಿ, ರುಕ್ಮವ್ವ ಖಾನಪ್ಪ ಗಿಡ್ಡನ್ನವರ, ಉಮೇಶ ಯಂಕಪ್ಪ ಹುಚ್ಚನ್ನವರ ಅವರಗಳನ್ನು ಗಾಯಪಡಿಸಿದ್ದಾನೆ ಎಂದು ತಿಮ್ಮಣ್ಣ ಬಾಲಪ್ಪ ಮುದಕವಿ ರಾಮದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಘಟನೆಯ ಸತ್ಯಾಂಶ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
ರಾಮದುರ್ಗ ಪಿಎಸ್ಐ ಸವಿತಾ ಮುನ್ಯಾಳ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ರಾಮದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


