Select Page

Advertisement

Gokak – ಕುಂಬಮೇಳಕ್ಕೆ ತೆರಳಿದ್ದ 6 ಜನ ಅಪಘಾತದಲ್ಲಿ ಸಾವು ; ಒಟ್ಟಿಗೆ ಅಂತ್ಯಕ್ರಿಯೆ

Gokak – ಕುಂಬಮೇಳಕ್ಕೆ ತೆರಳಿದ್ದ 6 ಜನ ಅಪಘಾತದಲ್ಲಿ ಸಾವು ; ಒಟ್ಟಿಗೆ ಅಂತ್ಯಕ್ರಿಯೆ

ಗೋಕಾಕ್ : ಪ್ರಯಾಗರಾಜ್ ನ ಐತಿಹಾಸಿಕ ಕುಂಬಮೇಳಕ್ಕೆ ತೆರಳಿ ಪವಿತ್ರ ಸ್ನಾನ ಮುಗಿಸಿ ಮರಳುವಾಗ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ 6 ಜನರ ಅಂತ್ಯಕ್ರಿಯೆ ಮಂಗಳವಾರ ಗೋಕಾಕ್ ನಲ್ಲಿ ನಡೆಯಿತು.

ಪ್ರಯಾಗರಾಜ್‌ದಿಂದ ತೂಫಾನ ಕ್ರೂಸರ್ ವಾಹನದಲ್ಲಿ ಜಬಲಪುರಗೆ ತೆರಳುವಾಗ ಬೆಳಿಗ್ಗೆ 6ಗಂಟೆಗೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರಗೆ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ. ಈ ಘಟನೆಯಲ್ಲಿ ಆರು ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೃತರು ಲಕ್ಷ್ಮೀ ಬಡಾವಣೆ ನಿವಾಸಿ ಬಾಲಚಂದ್ರ ಗೌಡರ(50) ಉದ್ಯೋಗ ಫ್ಯಾಬ್ರಿಕಷನ್, ಗುರುವಾರ ಪೇಟ ನಿವಾಸಿ ವಿರುಪಾಕ್ಷ ಗುಮತಿ(61) ಬಟ್ಟೆ

ವ್ಯಾಪಾರ, ಗೊಂಬಿಗುಡಿ ಹತ್ತಿರದ ನಿವಾಸಿ ಬಸವರಾಜ್ ಕುರಟ್ಟಿ(63) ಬಟ್ಟೆ ವ್ಯಾಪಾರ, ಗುರುವಾರ ಪೇಟ ನಿವಾಸಿ ಬಸವರಾಜ್ ದೊಡಮನಿ(49) ಕೆಎಸ್‌ಆರ್‌ಟಿಸಿ ಡ್ರೈವರ್, ಹುಕ್ಕೇರಿ ತಾಲೂಕಿನ ಆನಂದಪುರ ಗ್ರಾಮದ ನಿವಾಸಿ ಸುನೀಲ್ ಶೇಡಶ್ಯಾಳೆ(45) ಮೋಟರ್‌ವೈಕಲ್ ಶೋರೂಮ್ ಮಾಲಿಕ, ಬಾಗಲಕೋಟ ಜಿಲ್ಲೆ ಗುಳೇದಗುಡ್ಡದ ನಿವಾಸಿ ಈರಣ್ಣ ಶೇಬಿನಕಟ್ಟಿ(27), ಪ್ರಾಣಬಿಟ್ಟಿದ್ದರು.

Advertisement

Leave a reply

Your email address will not be published. Required fields are marked *

error: Content is protected !!