ಇವನು ವೈದ್ಯನಾ ಇಲ್ಲ ರಾಕ್ಷಸನಾ..? ಗರ್ಭಿಣಿ ಮಹಿಳೆ ಹೊಟ್ಟೆಯಲ್ಲಿ ಬಿಟ್ಟಿದ್ದೇನು…?
ಬೆಳಗಾವಿ : ಶಸ್ತ್ರಚಿಕಿತ್ಸೆ ವೇಳೆ ಗರ್ಭಿಣಿ ಮಹಿಳೆಯ ಹೊಟ್ಟೆಯಲ್ಲಿ ಹತ್ತಿ ಉಂಡೆ ಹಾಗೂ ಬಟ್ಟೆಯನ್ನು ಬಿಟ್ಟು ಹೊಲಿಗೆ ಹಾಕಿರುವ ಅಮಾನವೀಯ ಘಟನೆ ಚಿಕ್ಕೋಡಿ ತಾಯಿ, ಮಕ್ಕಳ ಆಸ್ಪತ್ರೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಹೊಟ್ಟೆ ನೋವಿನ ಹಿನ್ನಲೆಯಲ್ಲಿ ಬಾಣಂತಿ ಶೃತಿ ಬಡಿಗೇರ ಎಂಬುವವರು ಹುಕ್ಕೇರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಕಾಟನ್ ತುಂಡುಗಳು ಇರುವುದು ಪತ್ತೆಯಾಗಿದೆ. ನಂತರ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಗೆ ಚಿಕಿತ್ಸೆ ನೀಡಿದ್ದಾರೆ.
ಘಟನೆ ವಿವರ : ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದ ಗರ್ಭಿಣಿ ಶೃತಿ ಬಡಿಗೇರ ಕಳೆದ ಫೆ. 7 ರಂದು ಚಿಕ್ಕೋಡಿ ಪಟ್ಟಣದ ಸರಕಾರಿ ತಾಯಿ, ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಸಿಸೇರಿಯನ್ ಮೂಲಕ ಹೆರಿಗೆ ಮಾಡಿ ಮಹಿಳೆಯ ಹೊಟ್ಟೆಯಲ್ಲಿ ಕಾಟನ್ ತುಂಡುಗಳನ್ನು ಬಿಟ್ಟು ಹೊಲಿಗೆ ಹಾಕುವ ಮೂಲಕ ವೈದ್ಯರು ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಸಧ್ಯ ಬಾಣಂತಿ ಹುಕ್ಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಚಿಕ್ಕೋಡಿ ಸರಕಾರಿ ಆಸ್ಪತ್ರೆಯಲ್ಲಿ ಬಾಣಂತಿ ಮಹಿಳೆ ಸಾವಣಪ್ಪಿರುವ ಘಟನೆ ಮಾಸುವ ಮುನ್ನವೇ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಹೊಟ್ಟೆಯಲ್ಲಿ ಕಾಟನ್ ತುಂಡು ಬಿಟ್ಟು ಶಸ್ತ್ರಚಿಕಿತ್ಸೆ ಮಾಡಿದ್ದು ಬೆಳಕಿಗೆ ಬಂದಿದ್ದು, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.


