ಡಿಕೆ ಸುರೇಶ್ ತಂಗಿ ಎಂದು ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ
ಬೆಂಗಳೂರಿನ ಚಿನ್ನದ ಅಂಗಡಿಯಲ್ಲಿ ಸಂಸದ ಡಿಕೆ ಸುರೇಶ್ ಅವರ ತಂಗಿ ಎಂದು ಹೇಳಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ರಾಜರಾಜೇಶ್ವರಿ ನಗರದ ಐಶ್ವರ್ಯ ಗೌಡ ಎಂಬುವವರು ನಾನು ಡಿಕೆ ಸುರೇಶ್ ಅವರ ತಂಗಿ ಎಂದು ಹೇಳಿ ಬರೋಬ್ಬರಿ 8.41 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಖರೀದಿಸಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಐಶ್ವರ್ಯ ಗೌಡ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ನಲ್ಲಿ ಕೋಟ್ಯಂತರ ಮೌಲ್ಯದ ಚಿನ್ನಾಭರಣವನ್ನು ಖರೀದಿಸಿ ಹಣ ವಂಚನೆ ಮಾಡಿದ್ದರು, ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಂದ್ರ ಲೇಔಟ್ ನಿವಾಸಿ ವನಿತಾ ಐತಾಳ್ ಅವರು ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಹಿಂದೆ ಆರ್ ಆರ್ ನಗರದ ವಾರ್ಡ್ ಕಾರ್ಪೊರೇಟ್ ಆಗಲು ಬಂದಿದ್ದು, ನ.27, 2022 ರಲ್ಲಿ ದೊಡ್ಡ ಮಟ್ಟದಲ್ಲಿ ಆರ್ ಆರ್ ನಗರಹಬ್ಬ ಕಾರ್ಯಕ್ರಮ ಮಾಡಿದ್ದರು, ಅಷ್ಟೇ ಅಲ್ಲದೆ ಡಿಕೆ ಸುರೇಶ್ ಗೆ ಚಿನ್ನದ ಫೋಟೋ ಮಾಡಿಸಿಕೊಟ್ಟಿದ್ದಳು.
ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಐಶ್ವರ್ಯ ಗೌಡನ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದ್ದು, ಹಲವರಿಗೆ ಮೋಸ ಮಾಡಿದ್ದಾಳೆ ಎಂದು ಅರೋಪಿಸಲಾಗಿದೆ.


