500 ರೂ. ಕೊಟ್ಟರೆ ವರ್ಷವಿಡೀ ಉಚಿತ ರೇಷನ್ ; ವಂಚನೆ ಜಾಲ ಪತ್ತೆ
ಮಹಾರಾಷ್ಟ್ರ : ಕೇವಲ 500 ರೂ. ಕೊಟ್ಟರೆ ಒಂದು ವರ್ಷದವರೆಗೆ ಉಚಿತ ರೇಷನ್ ವಿತರಣೆ ಮಾಡುತ್ತೇವೆ ಎಂದು ನಂಬಿಸಿ ಸಾವಿರಾರು ಮಹಿಳೆಯರಿಗೆ ವಂಚನೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಕಚೇರಿ ಸ್ಥಾಪಿಸಿ ಸಿಬ್ಬಂದಿಗಳನ್ನು ನೇಮಕ ಮಾಡಿದ್ದ ವಂಚಕರು ಮಹಿಳೆಯರಿಂದ ವ್ಯವಸ್ಥಿತತವಾಗಿ ಹಣ ವಂಚನೆ ಮಾಡಿದ್ದರು.
ಇವರ ವಂಚನೆಗೆ ಮಹಾರಾಷ್ಟ್ರದ ಥಾಣೆಯ ಸಾವಿರಾರು ಮಹಿಳೆಯರು ಮೋಸಕ್ಕೆ ಒಳಗಾಗಿದ್ದಾರೆ.
ಬಹುತೇಕ ಕೊಳಗೇರಿ ಪ್ರದೇಶದ ಜನರನ್ನು ಈ ವಂಚಕರು ಟಾರ್ಗೆಟ್ ಮಾಡಿದ್ದಾರೆ. 500 ರೂ. ತುಂಬಿ ಹೆಸರು ನೊಂದಾಯಿಸಿಕೊಳ್ಳುವಂತೆ ಹೇಳಿದ್ದಾರೆ. ಇದೊಂದು ಸರ್ಕಾರಿ ಯೋಜನೆ ಎಂದು ಹೇಳಿ ಕರಪತ್ರದ ಮೂಲಕ ಪ್ರಚಾರ ಮಾಡಿದ್ದಾರೆ.
ಸಧ್ಯ ವಂಚನೆ ಆರೋಪದ ಮೇಲೆ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ರೀತಿಯ ಕೃತ್ಯ ತಮ್ಮ ಸುತ್ತಮುತ್ತಲಿನ ಜಾಗದಲ್ಲಿ ಕಂಡುಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಒಳಿತು.


