ಮದುವೆ ಮನೆಯಿಂದ ಫೋಟೋಗ್ರಾಫರ್ ನನ್ನು ಹೊತ್ತೊಯ್ದು ಮಾರಣಾಂತಿಕ ಹಲ್ಲೆ
ಬೆಳಗಾವಿ : ಮದುವೆ ಮನೆಯಿಂದ ಫೋಟೋಗ್ರಾಫರ್ ನನ್ನು ಅಪಹರಣ ಮಾಡಿದ್ದಲ್ಲದೆ ರಾಡ್ ನಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.
ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಫೋಟೋಗ್ರಾಫರ್ ಉಮೇಶ ಹೊಸೂರು ಹಲ್ಲೆಗೊಳಗಾದ ವ್ಯಕ್ತಿ. ಸಧ್ಯ ಹಲ್ಲೆ ಮಾಡಿದ್ದ ಆರೋಪದಲ್ಲಿ ಎಂಟು ಜನ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಬಸವರಾಜ್ ನರಟ್ಟಿಗೆ ಸೇರಿದ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ಉಮೇಶ12 ವರ್ಷಗಳ ಕಾಲ ಬಸವರಾಜ್ ನರಟ್ಟಿ ಸ್ಟುಡಿಯೋದಲ್ಲಿ ಕೆಲಸ ಮಾಡಿದ್ದ. ಸರಿಯಾಗಿ ಸಂಬಳ ಕೊಡ್ತಿಲ್ಲವೆಂದು ಕಳೆದ ವರ್ಷ ಕೆಲಸ ಬಿಟ್ಟು ಸ್ವಂತ ಸ್ಟುಡಿಯೋ ತೆರೆದಿದ್ದ ಉಮೇಶ ಮದುವೆ, ಗೃಹ ಪ್ರವೇಶಗಳ ಆರ್ಡರ್ ಹಿಡಿದು ವಿಡಿಯೋಗ್ರಾಫಿ ಮಾಡುತ್ತಿದ್ದ.
ಎರಡು ದಿನಗಳ ಹಿಂದೆ ಬೆಳಗಾವಿಯ ಕೆಪಿಟಿಸಿಎಲ್ ಹಾಲ್ನಲ್ಲಿ ನಡೆಯುತ್ತಿದ್ದ ಮದುವೆ ಆರ್ಡರ್ ಹಿಡಿದಿದ್ದ ಉಮೇಶ ಕೆಪಿಟಿಸಿಎಲ್ ಹಾಲ್ಗೆ ಬಂದ ವಿಕ್ಕಿ ಎಂಬಾತ ಉಮೇಶನನ್ನು ತನ್ನ ಕಾರಿನ ಕಡೆಗೆ ಕರೆದೊಯ್ದು ಅಪಹರಣ ಮಾಡಿದ್ದಾರೆ. ವಿಕ್ಕಿ ಹಾಗೂ ಆತನ ಇಬ್ಬರ ಸ್ನೇಹಿತರಿಂದ ಕಾರಿನಲ್ಲೇ ಉಮೇಶ ಮೇಲೆ ಹಲ್ಲೆ ಮಾಡಲಾಗಿದೆ.
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಿಸಿರುವ ಉಮೇಶ ಹಳೇ ದ್ವೇಷಕ್ಕೆ ಹಲ್ಲೆ ಮಾಡಿ, ಈಗ ಮಹಿಳೆಯ ಫೋಟೊ ಇದೆ ಎಂದು ಸುಳ್ಳು ಕಥೆ ಕಟ್ಟುತ್ತಿದ್ದಾರೆಂದು ಉಮೇಶ ಆರೋಪ ಮಾಡಿದ್ದಾರೆ.ಉಮೇಶ ನೀಡಿದ ದೂರಿನ ಆಧರಿಸಿ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.


